Sat. Nov 23rd, 2024

Rajasthan: ಪ್ರೀತಿಸುವಂತೆ ಮುಸ್ಲಿಂ ಯುವಕನ ಕಾಟ – ಮನನೊಂದು ಇಬ್ಬರು ಸಹೋದರಿಯರು ಜೀವಾಂತ್ಯ – ಆದ್ರೆ ಈತನ ಬಲೆಗೆ ಆ ಸಹೋದರಿಯರು ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?!

ರಾಜಸ್ಥಾನ:(ನ.22) ದೇಶದ ನಾನಾ ಭಾಗದಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಸಹೋದರಿಯರಿಬ್ಬರಿಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಘಟನೆಗೆ ಸಂಬಂಧಿಸಿದಂತೆ 19 ವರ್ಷದ ಶಹವಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 🟣ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್(ರಿ.)

ರಾಜಸ್ಥಾನದ ಉದಯಪುರದ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಸಹೋದರಿಯರ ಆತ್ಮಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಹಾಪುರ್‌ನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಉತ್ತರಪ್ರದೇಶದ ಹಾಪುರ್‌ಗೆ ಹೋಗಿ ಶಹವಾಜ್‌ನನ್ನು ಬಂಧಿಸಿ ಉದಯಪುರಕ್ಕೆ ಕರೆ ತಂದಿದ್ದಾರೆ. ಈ ಯುವಕ ಸೋಶಿಯಲ್ ಮೀಡಿಯಾ ಮೂಲಕ ಈ ಸಹೋದರಿಯರಿಗೆ ಪರಿಚಯವಾಗಿದ್ದ. ನಂತರ ಹಣ ನೀಡುವಂತೆ ಹಾಗೂ ಪ್ರೀತಿಸುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ. ಯುವಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿದೆ.

ಕಳೆದ 10 ದಿನಗಳ ಹಿಂದೆ ಗೋಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋದರಿಯರಿಬ್ಬರ ಶವಗಳು ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಯುವಕನ ಬಗ್ಗೆ ತನಿಖೆ ಆರಂಭಿಸಿ ಆತನನ್ನು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರು ಬಾಲಕಿಯರು ಒತ್ತಡದಲ್ಲಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಿರುವಾಗ ಪೊಲೀಸರು ಆತನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಶೋಧಿಸಿದಾಗ ಆತ ಸಂಪರ್ಕ ಹೊಂದಿದ್ದ ಎಂಬುದು ದೃಢಪಟ್ಟಿದೆ.

ಆರೋಪಿಗಳು ಇಬ್ಬರು ಸಹೋದರಿಯರಿಂದ ಸುಮಾರು 12,000 ರೂ.ಗಳನ್ನು ಸುಲಿಗೆ ಮಾಡಿದ್ದಾನೆ. ಕಳೆದ ಎರಡು ತಿಂಗಳುಗಳಿಂದ ನಿರಂತರ ತೊಂದರೆ ನೀಡಿದ್ದಾನೆ. ಇದರೊಂದಿಗೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ಸದ್ಯ ಲವ್ ಜಿಹಾದ್‌ಗೆ ಯತ್ನಿಸಿದ್ದ ಶಹವಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *