Sun. Nov 24th, 2024

ಮೇಷ ರಾಶಿ: ಪ್ರಯಾಣ ದೂರವೆನಿಸದರೂ ಮಾಡುವುದು ಅನಿವಾರ್ಯ. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರುಗಳನ್ನು ಬೌದ್ಧಿಕವಾಗಿ ಸೋಲಿಸಬಹುದು. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ರಾಜಕಾರಣಿಗಳ ಕೆಲಸಕ್ಕೆ ಪ್ರಶಂಸೆಯು ಸಿಗುವುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು.

ವೃಷಭ ರಾಶಿ: ಗುದ್ದಾಟದಿಂದ ಮೈ ಕೈಗೆ ನೋವಾಗಬಹುದು, ಕಾರ್ಯ ಮಾತ್ರ ಆಗದು. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟುವುದು. ಸ್ಥಿರಾಸ್ತಿಯ ಖರೀದಿಯ ಯೋಗವಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣ ಕಷ್ಟವಾದೀತು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಳೆದುಹೋಗಬಹುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು. ಅನಾರೋಗ್ಯದ ಕಾರಣ ವಿಶ್ರಾಂತಿ ಅನಿವಾರ್ಯವಾಗುವುದು.

ಮಿಥುನ ರಾಶಿ: ಅನ್ಯರ ಜೊತೆ ಮಾತಿಗೆ ಮಾತು ಬೆಳೆಯುವುದು. ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ನಿಮ್ಮ ಬಾಲಿಶವಾದ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು. ವಿದ್ಯಾಭ್ಯಾಸದ ವಿಚಾರಕ್ಕೆ ವಾಗ್ವಾದವಾಗಬಹುದು. ಕೆಲಸದಲ್ಲಿ ಪಯತ್ನಪೂರ್ವಕ ಹಿನ್ನಡೆ ಮಾಡಿಸುವರು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌

ಕರ್ಕಾಟಕ ರಾಶಿ: ಬೇಗ ತೃಪ್ತಿಯಾಗುವ ಸಾಧ್ಯತೆ ಇದೆ. ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ತೋರಿಕೆಯನ್ನು ಹೆಚ್ಚು ಕಾಲ ಇಟ್ಟುಕೊಳ್ಳಲಾಗದು. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಲಿ ಸಮಯವು ಸಿಗದೇ ಕಷ್ಟವಾಗುವುದು. ಮಿತ್ರನಿಗೆ ಗೊತ್ತಿಲ್ಲದೇ ಹಣವನ್ನು ಪಡೆಯುವಿರಿ. ವಿದ್ಯಾಭ್ಯಾಸದ ಸಾಲವು ಮುಕ್ತಾಯವಾಗುವುದು.

ಸಿಂಹ ರಾಶಿ: ಸಂಗಾತಿಯಿಂದ ಬಹಳ ದಿನಗಳ ಅನಂತರ ಪ್ರಶಂಸೆ ಸಿಗುವುದು. ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು.

ಕನ್ಯಾ ರಾಶಿ: ಸಾಮಾಜಿಕ ಬೆಳವಣಿಗೆಯಿಂದ ತೊಂದರೆ ಬರುವ ಸಾಧ್ಯತೆ ಇದೆ. ಚರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ದೌರ್ಬಲ್ಯವನ್ನು ಹಿಮ್ಮೆಟ್ಟಿಸುವುದು ಕಷ್ಟವಾದೀತು. ಸರಳವಾಗಿರಲು ಇರುವುದು ನಿಮಗೆ ಆಗದು. ಇನ್ನೊಬ್ಬರ ಜೊತೆ ಮಾತನಾಡುವಾಗ ಹೆದರಿಕೆ ಇರುವುದು.

ತುಲಾ ರಾಶಿ: ಇಂದಿನ ದಿನ ದುಃಖಾಂತವಾಗಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ತರಬೇತುದಾರರಿಗೆ ಹೆಚ್ಚಿನ ಮನ್ನಣೆಯು ಬರಲಿದೆ. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ನೀವು ಅಪವಾದದ ಸಂಕೋಲೆಯಲ್ಲಿ ಸಿಕ್ಕಿಬೀಳಬಹುದು. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನ ತರಬಹುದು.

ವೃಶ್ಚಿಕ ರಾಶಿ: ಸಾಂಸಾರಿಕ ಜಂಜಾಟದಿಂದ ಬಿಡುಗಡೆಯಾಗಲು ಪ್ರಯತ್ನಿಸುವಿರಿ. ಯಾರಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ದಾನ ಮಾಡುವುದು ಒಳ್ಳೆಯದೇ. ಆದರೆ ಒಳ್ಳೆಯದನ್ನು ಮಾತ್ರ ದಾನ ಮಾಡಿ. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು.

ಧನು ರಾಶಿ: ಏನಾದರೂ ಮಾಡಿ, ಆದರೆ ಮನಸ್ಸಿಗೆ ತೃಪ್ತಿ ತರುವಂತೆ ಇರಲಿ. ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳುವರು. ಕೆಲಸ ಕಾರ್ಯಗಳಲ್ಲಿ ಪೂರ್ಣಜಯವು ಪ್ರಾಪ್ತವಾಗದು. ಯಾವುದರ ಮೌಲ್ಯವನ್ನೂ ನೋಡಿ ಊಹಿಸಲಾಗದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಆರ್ಥಿಕತೆಯ ವೃದ್ಧಿಗಾಗಿ ತಂತ್ರವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಗೆ ಮೆಚ್ಚಿಸಿ ಅಧಿಕಾರವನ್ನು ಪಡೆಯುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳುವುದು ಬೇಡ.

ಮಕರ ರಾಶಿ: ನಾಯಕ ಸ್ಥಾನದಲ್ಲಿ ಇರುವವರಿಗೆ ಭಯವು ಕಾಡಬಹುದು. ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ಉದ್ಯಮವು ಯಶಸ್ಸಿನ ಒಂದೊಂದೇ ಹಂತವನ್ನು ಏರಲಿದೆ. ಸಹೋದರರ ಬಾಂಧವ್ಯವು ಸಡಿಲಾಗುವುದು. ಇಂದಿನ‌ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಆರ್ಥಿಕತೆಯನ್ನು ದೃಢವಾಗಿ ಇಟ್ಟುಕೊಳ್ಳಬೇಕು. ನಿಮ್ಮ ನಿರ್ಧಾರವನ್ನು ಬದಲು ಮಾಡಿದ್ದಕ್ಕೆ ಬೇಸರವಾದೀತು.

ಕುಂಭ ರಾಶಿ: ಇಂದು ನಿಮ್ಮನ್ನು ಮೆಚ್ಚಿಸಿ ನಿಮ್ಮಿಂದ ಸಂಪತ್ತನ್ನು ಪಡೆಯಬಹುದು. ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ಖಾಸಗಿ ಉದ್ಯೋಗದಲ್ಲಿ ನಿಮಗೆ ಮನ್ನಣೆಯು ಸಿಗುವುದು. ಸಹೋದ್ಯೋಗಿಗಳ ಜೊತೆ ಆತ್ಮೀಯತೆ ಬೆಳೆಯುವುದು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು.

ಮೀನ ರಾಶಿ: ಅಗತ್ಯವಿದ್ದಲ್ಲಿ ನಿಮ್ಮ ಸಹಾಯವು ಸಿಗಲಿದೆ. ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ಪೂರ್ವಾಗ್ರಹವಿಲ್ಲದೇ ಮಾತನಾಡುವುದು ಸೂಕ್ತ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಅಪಕ್ವತೆಯನ್ನು ಹೇಳಿಕೊಳ್ಳಲಾಗದು. ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಯಶಸ್ಸನ್ನು ಪಡೆಯುವ ಹಂಬಲದಿಂದ ಏನಾದರೂ ಮಾಡಿಕೊಳ್ಳುವಿರಿ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಹೂಡಿಕೆಯತ್ತ ಗಮನಹರಿಸುವುದು ಬೇಡ.

Leave a Reply

Your email address will not be published. Required fields are marked *