Sat. Nov 23rd, 2024

Mangaluru : ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೆಂಡತಿ ಮೇಲೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ ಗಂಡ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಮಂಗಳೂರು:(ನ.23) ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ದೈಹಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಲ್ಲದೇ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಯೊಂದು ಮಂಗಳೂರಲ್ಲಿ ನಡೆದಿದೆ.

ಇದನ್ನೂ ಓದಿ: ⚖Aries to Pisces: ಇಷ್ಟ ಪಟ್ಟಿದ್ದನ್ನು ಸಿಂಹ ರಾಶಿಯವರು ಕಳೆದುಕೊಳ್ಳುವರು!!!

ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪದ ನಿವಾಸಿ ಮೊಹಮ್ಮದ್ ದಿಲ್ ಪಾಜ್ ನನ್ನು ಮಹಿಳೆ 2019ರಲ್ಲಿಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಿಲ್ ಫಾಜ್ ತಮ್ಮ ಹೆಂಡತಿ ಜೊತೆ ಅನೋನ್ಯವಾಗಿಯೇ ಇದ್ದ, ಈ ನಡುವೆ ದಿಲ್ ಫಾಜ್ ಅನ್ಯ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ನಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.

ನಂತರ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದ ಮೇಲೆ, ಕುಟುಂಬದ ಹಿರಿಯರು ಸೇರಿ ದಿಲ್ ಫಾಜ್‌ ಗೆ ಬುದ್ಧಿವಾದ ಹೇಳಿದ್ದರು. ನಂತರವೂ ಸುಧಾರಿಸದ ದಿಲ್ಫಾಜ್‌ನನ್ನು, ನ.8ರಂದು ಹೀನಾ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಪ್ರಶ್ನಿಸಿದಾಗ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ದಿನ ರಾತ್ರಿ ಸಬೀಲ್ ಅಹಮ್ಮದ್ ಅವರನ್ನು ತನ್ನ ಮನೆಗೆ ಕರೆದು, ಅವರ ಎದುರಿನಲ್ಲಿ ಪತ್ನಿ ಹೀನಾಗೆ ಮೂರು ಬಾರಿ ತಲಾಖ್ ಹೇಳಿ “ನೀನು ನನ್ನ ಪತ್ನಿಯಲ್ಲ” ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ.

ದೂರಿನ ಪ್ರತಿಯಲ್ಲಿ ಏನಿದೆ?
2019ರಲ್ಲಿ ನಮ್ಮ ಮದುವೆಯಾಗಿದ್ದು, ಆ ವೇಳೆ ನನ್ನ ತಂದೆ 22 ಪವನ್ ಚಿನ್ನ, ದಿಲ್ಫಾಜ್‌ಗೆ ವಾಚ್ ಖರೀದಿಸಲು ₹50 ಸಾವಿರ ನಗದು ನೀಡಿದ್ದರು. ನನ್ನ ತಂದೆ ಕೈ ತುಂಬಾ ವರದಕ್ಷಿಣೆ ನೀಡಿಲ್ಲವೆಂದು ದಿಲ್ಫಾಜ್ ತಂದೆ ಉಮರಬ್ಬ ಕೂಡ ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಹೀನಾ ಫಾತಿಮಾ, ದಿಲ್ಫಾಜ್ ಮತ್ತು ಉಮರಬ್ಬ ವಿರುದ್ಧ ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *