Sun. Nov 24th, 2024

Dharmasthala: ಡಿಪೋದಲ್ಲಿ ಸೂಕ್ತ ಬಸ್ ವ್ಯವಸ್ಥೆಗಾಗಿ ಎಬಿವಿಪಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ.! – ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಆಕ್ರೋಶ – ಸರಕಾರಿ ಬಸ್ಸ್ ಗಳ ಮುಗಿಯದ ಗೋಳು!!

ಧರ್ಮಸ್ಥಳ:(ನ.24) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ಘಟಕದಿಂದ ಧರ್ಮಸ್ಥಳ ಕೆ ಎಸ್ ಆರ್ ಟಿ‌ ಸಿ‌ ಡಿಪೋದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮಾಂತರ ಪ್ರದೇಶಗಳ ಬಸ್ಸಿನ ಸಮಸ್ಯೆಯ ಬಗ್ಗೆ ಹಾಗೂ ಸಾರಿಗೆ ಇಲಾಖೆಯಿಂದ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಬೃಹತ್ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: ⭕ಪಕ್ಷಿಕೆರೆ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಕ್ಷಿಕೆರೆ ಕಾರ್ತಿಕ್ ಭಟ್ ಕೊಲೆ, ಆತ್ಮಹತ್ಯೆ ಕೇಸ್

ಪ್ರತಿ ಬಾರೀ ಬಸ್ ಸಮಸ್ಯೆ ಆದಾಗಲೂ ಪ್ರತಿಭಟನೆ ಮಾಡುವುದು, ದೂರು ನೀಡುವುದು ಅಷ್ಟೇ ಆಗಿದೆ. ಸಮಸ್ಯೆಗೆ ಬೇಕಾದ ಶೀಘ್ರ ಪರಿಹಾರವನ್ನು ಕೆ ಎಸ್ ಆರ್ ಟಿ‌ ಸಿ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಧರ್ಮಸ್ಥಳ ಹೊಸ ಡಿಪೋದಲ್ಲಿ ಪ್ರತಿಭಟನೆ ನಡೆಯಿತು. ಕಾಯರ್ತಡ್ಕ , ಮಿಯ್ಯಾರ್, ಅನಾರ್, ಪಟ್ರಮೆ, ಶಿಶಿಲ ಊರಿನ ಬಸ್ ಗಳದ್ದು ಪ್ರತಿ ದಿನ ಇದ್ದಿದ್ದೇ ಗೋಳು.ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಮನೆ ಮತ್ತು‌ ಕಾಲೇಜಿಗೆ ತಲುಪಲಾಗುತ್ತಿಲ್ಲ.

ಎಷ್ಟು ಬಾರಿ ದೂರು ನೀಡಿದರು ಪ್ರಯೋಜನವಿಲ್ಲ, ಜಿಲ್ಲಾಧಿಕಾರಿಗೆ ಮನವಿಯನ್ನು ನೀಡಿದ್ದೇವೆ, ಡಿಪೋ ಮ್ಯಾನೇಜರ್ ಗೂ ಮನವಿ ನೀಡಿದ್ದೇವೆ ಅವರು ಪರಿಹಾರ ನೀಡುವ ಎಂದು ಹೇಳಿದ್ದಾರೆ, ಹೊರತು ಒಂದು ವರ್ಷದಿಂದ ಯಾವುದೇ ಬದಲಾವಣೆ ಆಗಲಿಲ್ಲ,

ವಿದ್ಯಾರ್ಥಿಗಳು ಪ್ರತಿದಿನ ಪರದಾಡುವ ಪರಿಸ್ಥಿತಿ, ಕಂಡಕ್ಟರ್ ಬಳಿ ಯಾಕೆ ಲೇಟು ಅಂತ ಕೇಳಿದರೆ ಬೈತಾರೆ, ಕೆಟ್ಟ ಪದಗಳಿಂದ ಬೈತಾರೆ, ದಿನಾಲೂ ಬಸ್ ಹಾಳಾಗಿದೆ‌ ಎಂದು ಕಾರಣ ಹೇಳ್ತಾರೆ, ದಿನಾಲೂ ಇದೇ ಗೋಳು ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು