ಕಲ್ಮಂಜ :(ನ.24) ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ನ.23 ರಂದು ನಡೆಯಿತು. ಕಾರ್ಯಕ್ರಮವನ್ನು ಪುಟಾಣಿ ಧನ್ವಿತ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಇದನ್ನೂ ಓದಿ: ⭕ಬೆಂಗಳೂರು: ಅಣ್ಣ ಪ್ರೀತಿ ಮಾಡಿ ತಪ್ಪು ಮಾಡ್ಬಿಟ್ಟೆ
ಈ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಹಾಗೂ ಕೆಲವೊಂದು ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ರೋಟರಿ ಸಮುದಾಯದಳದ ಮಾಜಿ ಅಧ್ಯಕ್ಷರಾದ ಸತೀಶ್ ಭಟ್, ರಾಘವ ಕಲ್ಮಂಜ, S D M C ಅಧ್ಯಕ್ಷರಾದ ದಿನೇಶ್ ಗೌಡ, ಶಾಲೆಯ ಮುಖ್ಯ ಶಿಕ್ಷಕಿಯಾದ ಧರ್ಣಮ್ಮ,
ಬಾಲವಿಕಾಸ ಸಮಿತಿಯ ಸದಸ್ಯರಾದ ಜಗನ್ನಾಥ ಗೌಡ, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸದಸ್ಯರು ಹಾಜರಿದ್ದರು. ಶ್ರೀಮತಿ ವಸಂತಿ ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮವನ್ನು ನಿರೂಪಿಸಿದರು, ಸ್ವಾಗತ ಹಾಗೂ ಧನ್ಯವಾದವನ್ನು ಲಲಿತಾ ಬನದಬೈಲು ನೆರವೇರಿಸಿದರು.