Tue. Apr 15th, 2025

Mangalore: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆ#ತ್ಮಹತ್ಯೆಗೆ ಯತ್ನ!! – ಜೀವ ರಕ್ಷಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ರಕ್ಷಣೆ

ಸೋಮೇಶ್ವರ ಸಮುದ್ರ ತೀರದ ರುದ್ರಪಾದೆ(ಬಂಡೆ)ಯಿಂದ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ವಿದ್ಯಾರ್ಥಿನಿಯೋರ್ವಳನ್ನ ಜೀವರಕ್ಷಕ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಸೇರಿ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಇದನ್ನೂ ಓದಿ: 🔴ಸುಬ್ರಹ್ಮಣ್ಯ: (ನ.25) ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದದಲ್ಲಿ ಮಹಾರುದ್ರ ಯಾಗ

ಮಾಡೂರುವಿನ ಬಾಡಿಗೆ ಮನೆಯಲ್ಲಿ ವಾಸವಿರುವ ಯುವತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ.

ಇಂದು ಬೆಳಿಗ್ಗೆ ವಿದ್ಯಾರ್ಥಿನಿಯು ಸಮುದ್ರ ತೀರದ ರುದ್ರ ಪಾದೆಯಿಂದ ನೀರಿಗೆ ಜಿಗಿದಿದ್ದಾಳೆ.ರುದ್ರಪಾದೆಯಲ್ಲಿದ್ದ ಹೊರ ರಾಜ್ಯದ ವಲಸೆ ಕಾರ್ಮಿಕನೋರ್ವನು ತಕ್ಷಣವೇ ನೀರಿಗೆ ಜಿಗಿದು ಯುವತಿಯನ್ನ ರಕ್ಷಿಸಿ ದಡದತ್ತ ಎಳೆಯಲು ಮುಂದಾಗಿದ್ದಾನೆ.

ಆದರೆ ಯುವತಿಯು ಪ್ರಾಣ ಸಂಕಟದಿಂದ ರಕ್ಷಿಸಲು ಬಂದ ವಲಸೆ ಕಾರ್ಮಿಕನನ್ನೇ ಗಟ್ಟಿಯಾಗಿ ಬಿಗಿದಪ್ಪಿದ್ದು,ಇಬ್ಬರೂ ನೀರುಪಾಲಾಗುವ ಪರಿಸ್ಥಿತಿ ಎದುರಾಗಿತ್ತು.ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸುಜಿತ್ ಎಂಬವರು ಟಯರ್ ಟ್ಯೂಬ್ ಮೂಲಕ ಯುವತಿ ಮತ್ತು ವಲಸೆ ಕಾರ್ಮಿಕನನ್ನ ದಡಕ್ಕೆ ಎಳೆದು ರಕ್ಷಿಸಿದ್ದಾರೆ.ಸ್ಥಳೀಯರು ಜೀವ ರಕ್ಷಕ ಸಿಬ್ಬಂದಿ ಸುಜಿತ್ಗೆ ಸಹಕಾರ ನೀಡಿದ್ದಾರೆ.
ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು,ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Leave a Reply

Your email address will not be published. Required fields are marked *