ಪಕ್ಷಿಕೆರೆ:(ನ.24) ಪಕ್ಷಿಕೆರೆ ಕಾರ್ತಿಕ್ ಭಟ್ ಕೊಲೆ, ಆತ್ಮಹತ್ಯೆ ಕೇಸ್ ನಲ್ಲಿ ಬಂಧಿತರಾಗಿದ್ದ ಕಾರ್ತಿಕ್ ತಾಯಿ ಶ್ಯಾಮಲಾ, ಅಕ್ಕ ಕಣ್ಮಣಿಗೆ ಜಾಮೀನು ಮಂಜೂರಾಗಿದೆ.
ಇದನ್ನೂ ಓದಿ: 🏠ಉಜಿರೆ: ಅಶಕ್ತ ಕುಟುಂಬಕ್ಕೆ ಹೊಸ ಮನೆ “ಅನುಗ್ರಹ”
ಶ್ಯಾಮಲಾ ಹಾಗೂ ಕಣ್ಮಣಿ ಸಾವಿಗೆ ಪ್ರಚೋದನೆ ಕೇಸ್ನಲ್ಲಿ ಜೈಲು ಸೇರಿದ್ದರು. ತಾಯಿ, ಮಗಳು ಬಂಧನಕ್ಕೆ ಊರವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಿರಂತರವಾಗಿ ಯು ಪ್ಲಸ್ ವಾಹಿನಿ ಸುದ್ದಿ ಪ್ರಸಾರ ಮಾಡಿದ್ದರು.
ನಿನ್ನೆ ಸಂಜೆ ಜಾಮೀನು ಮೇಲೆ ತಾಯಿ-ಮಗಳು ಬಿಡುಗಡೆಯಾಗಿದ್ದಾರೆ. ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಂಜೂರಾಗಿದೆ.