ಸಕಲೇಶಪುರ:(ನ.24) ಹಿಂದೂಗಳ ಪವಿತ್ರತೆ ಕಾಪಾಡಿಕೊಂಡು ಬರುತ್ತಿರುವ ಚಂದ್ರದ್ರೋಣ ಪರ್ವತದಲ್ಲಿನ ದತ್ತಪೀಠದಲ್ಲಿ ಶಾಖದ್ರಿ ಹಾಗೂ ಮುಜಾವರ್’ಗಳ ದಬ್ಬಾಳಿಕೆ ಮೀತಿ ಮೀರಿದ್ದು ಜಿಲ್ಲಾಡಳಿತ ಮೌನ ವಹಿಸಿರುವುದು ಖಂಡನೀಯವಾಗಿದೆ.
ಇದನ್ನೂ ಓದಿ: 🛑ಬೆಂಗಳೂರು: ಜರ್ಮನಿಯಲ್ಲಿ ಎಂಎಸ್ ಪದವಿ, ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉದ್ಯೋಗ
ಇತ್ತೀಚೆಗೆ ಪೀಠದ ಒಳಗಿನ ಭಾಗದಲ್ಲಿ ಅರ್ಚಕರು ಹಾಕಿರುವ ಹೂವೂ ಹಚ್ಚಿದ ಗಂಧ ಹಾಗೂ ಅರಿಶಿನ ಕುಂಕುಮ ಮುಜಾವರ್ ತೆಗೆದಿರುವುದು ಕಾನೂನು ಬಾಹಿರವಾಗಿದೆ. ಮುಜಾವರ್ ಸರ್ಕಾರದ ಆದೇಶದಂತೆ ಸೋಮವಾರ ಗುರುವಾರ ದರ್ಗಾಗೆ ಲೋಬಾನ ಹಾಕುವುದು.
ಫತೇಹಾ ನೀಡೋದು ಬಿಟ್ಟು ಹಿಂದೂ ಪೀಠದ ಒಳಗೆ ಹೋಗಿ ಅಪವಿತ್ರ ಮಾಡೋತ್ತಿರೋದು ಹಿಂದೂಗಳ ಭಾವನೆಗೆ ದಕ್ಕೆ ಉಂಟಾಗುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ.
ಪ್ರಶ್ನಿಸಿದ ಹಿಂದೂ ಅರ್ಚಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಶಾಂತಿ ಕಾದಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮದ್ಯೆ ಪ್ರವೇಶಿಸಬೇಕು. ಸರ್ಕಾರದ ಸ್ಪಷ್ಟವಾದ ಆದೇಶವಿದ್ದರೂ ಸಹ ಮುಜಾವರ್ ಪೀಠದ ಒಳಗೆ ಹೋಗುತ್ತಿರುವುದು ಖಂಡನೀಯ.
ದತ್ತಪೀಠದ ಅರ್ಚಕರ ರಕ್ಷಣೆ ಜಿಲ್ಲಾಡಳಿತದ ಹೊಣೆಯಾಗಿದ್ದು ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕು ಎಂದು ರಘು ಸಕಲೇಶಪುರ ಆಗ್ರಹಿಸಿದ್ದಾರೆ.