Wed. Apr 16th, 2025

Udupi: ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಉಡುಪಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು

ಉಡುಪಿ:(ನ.24) ಉಡುಪಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಮಹತ್ವದ ಭೇಟಿಯಲ್ಲಿ ಗೃಹ ಸಚಿವರ ಜೊತೆ ಅನೇಕ ಸಂಗತಿಗಳನ್ನು ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: 🔴ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನಲ್ಲಿ “ಮಾನಸ ಮಾರ್ಗದರ್ಶನ ಹಾಗೂ ಸಂವಾದ” ಕಾರ್ಯಕ್ರಮ

ರಾಷ್ಟ್ರೀಯ ಭದ್ರತೆ, ಹಿತಾಸಕ್ತಿಯ ವಿಚಾರ ವಿಮರ್ಶೆ ನಡೆಸಿದ್ದಾರೆ. ರಾಜ್ಯದಲ್ಲಿ ವಕ್ಫ್ ದುರುಪಯೋಗದಿಂದ ರೈತಾಪಿ ಮತ್ತು ಜನಸಾಮಾನ್ಯರ ಸಂಕಷ್ಟ‌ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಜರಾಯಿ ಮುಕ್ತ ಹಿಂದೂ ದೇವಳ, ಬಾಂಗ್ಲಾದೇಶದಿಂದ ನುಸುಳುವಿಕೆ, ಮಣಿಪುರ ಬಂಗಾಳ ಹಿಂಸಾಚಾರ, ಮುಂತಾದ ಎಲ್ಲ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನು ಕಾನೂನಿನ ನೆಲೆಯಲ್ಲಿ ಪರಿಹರಿಸುವ ಭರವಸೆ ಮಾನ್ಯ ಸಚಿವರಿಂದ ಪಡೆದರು ಎಂದು ಮಠದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *