Mon. Nov 25th, 2024

Belthangady: ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಬೆಳ್ತಂಗಡಿ:(ನ.25) ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ 76 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ನೇಮಕವಾಗಿದ್ದಾರೆ.

ಇದನ್ನೂ ಓದಿ: 🟣ಮೊಗ್ರು: ಅಲೆಕ್ಕಿ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬದ ಪ್ರಯುಕ್ತ ರಜತ ಮಹೋತ್ಸವ ಪ್ರತಿಬಿಂಬ ಎಂಬ

ಓರ್ವ ವ್ಯಕ್ತಿ ಕಳೆದ 50 ವರ್ಷಗಳಿಂದ ಅತೀ ಹೆಚ್ಚು ಪಾರಂಪರಿಕ, ಸಾಂಸ್ಕೃತಿಕ ವಸ್ತುಗಳ ಸಂಗ್ರಹದ ಜತೆಗೆ 7500 ತಾಳೆ ಗರಿ ಹಸ್ತಪ್ರತಿ, 21,000 ಕಲಾ ಪ್ರಕಾರ, 25,000 ಅತೀ ಹಳೆಯ ಮತ್ತು ಅಪರೂಪದ ಪುಸ್ತಕಗಳು,

100 ವಿಂಟೇಜ್ ವಾಹನಗಳ ಸಂಗ್ರಹವು ಧರ್ಮಸ್ಥಳ ಮಂಜೂಷಾ ಸಂಗ್ರಹಾಲಯದಲ್ಲಿರುವ ಅಪರೂಪದ ವಸ್ತುಗಳನ್ನು ಪರಿಗಣಿಸಿ ನ.25 ರಂದು ಹುಟ್ಟುಹಬ್ಬದ ದಿನದಂದು ಈ ಪ್ರಶಸ್ತಿಯನ್ನು ಹಸ್ತಾಂತರಿಸಲಾಗಿದೆ.

ಡಾ.ಹೆಗ್ಗಡೆ ಹುಟ್ಟುಹಬ್ಬದಂದು ರಾಜ್ಯಾದ್ಯಂತ ಗಣ್ಯರು, ಅಭಿಮಾನಿಗಳು ಶುಭಹಾರೈಸಿದರು. ನ.26 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರಂಭಗೊಳ್ಳಲಿದ್ದು ಕ್ಷೇತ್ರದಲ್ಲಿ ಸಂಭ್ರಮ ಸಡಗರ ಮನೆಮಾಡಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು