Wed. Apr 16th, 2025

Liquor Rate: ಮದ್ಯ ಪ್ರಿಯರಿಗೆ ಸಿಹಿ ಸುದ್ದಿ – ಬಿಯರ್‌ ದರದ ಬಗ್ಗೆ ಅಬಕಾರಿ ಇಲಾಖೆ ಹೇಳಿದ್ದೇನು?!

Liquor Rate:(ನ.25) ಮದ್ಯಪಾನ ಪ್ರಿಯರೇ ನಿಮಗೆ ರಾಜ್ಯಸರಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ಬಾರಿ ಹೆಚ್ಚಿನ ಚಳಿ ಇರುವುದರಿಂದ, ಇದನ್ನು ಗಮನಕ್ಕೆ ಬಂದ ಕಾರಣದಿಂದ, ಸರಕಾರ ಚಳಿಗಾಲ ಮುಗಿಯುವವರೆಗೆ ಬಿಯರ್‌ ದರದಲ್ಲಿ ಯಾವುದೇ ಪರಿಷ್ಕರಣೆ ಇರುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: 🚫ಬೆಂಗಳೂರು: ಬಿಪಿಎಲ್‌ ಕಾರ್ಡ್‌ ರದ್ದು?!

ಚಳಿಗಾಲದಲ್ಲಿ ಬಿಯರ್‌ ದರ ಏರಿಕೆ ಮಾಡಿದರೆ ಆದಾಯದಲ್ಲಿ ನಷ್ಟ ಆಗಲಿದೆ. ಹಾಗಾಗಿ ಪ್ರತಿವರ್ಷದಂತೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ, ಈ ಕುರಿತು ಅಬಕಾರಿ ಇಲಾಖೆಗೆ ಬಿಯರ್‌ ಮಾರಾಟ ಕುಸಿತವಾಗುವ ಆತಂಕ ಉಂಟಾಗಿದೆ. ಏಕೆಂದರೆ ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚು ಬಿಯರ್‌ ಕುಡಿಯಲ್ಲ. ಹಾಗಾಗಿ ಆದಾಯದಲ್ಲಿ ಶೇ.10 ರಿಂದ 20 ರಷ್ಟು ನಷ್ಟ ಉಂಟಾಗಲಿದೆ.

ಬಿಯರ್‌ ದರ ಏರಿಕೆಯಾದರೆ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜನವರಿಯವರೆಗೆ ಯಾವುದೇ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಸರಕಾರ ಹೇಳಿದೆ.

Leave a Reply

Your email address will not be published. Required fields are marked *