Tue. Jul 22nd, 2025

Sonandur: ಇದಲ್ವೇ ಮಾನವೀಯತೆ ಅಂದ್ರೆ – ಪರ್ಸ್ ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ KSRTC ಸಿಬ್ಬಂದಿ ಅಶ್ರಫ್

ಸೋಣಂದೂರು:(ನ.25) ಪರ್ಸ್ ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: ⭕ಉತ್ತರ ಪ್ರದೇಶ: ಗೂಗಲ್ ಮ್ಯಾಪ್ ನಂಬಿ ಹೋದ ಮೂವರು ಸೇರಿದ್ದು ಮಸಣಕ್ಕೆ!

ಏನಿದು ಘಟನೆ?

ನ. 20 ರಂದು ಮಂಗಳೂರಿಂದ ಮುಂಬೈ ಹೋಗುವ ಬಸ್ಸಿನಲ್ಲಿ ಉಡುಪಿಯಿಂದ ಕುಮಟಕ್ಕೆ ಪ್ರಯಾಣಿಸುವ ಪ್ರಯಾಣಿಕರೊಬ್ಬರ ಪರ್ಸ್ ಬಸ್ಸಲ್ಲಿ ಬಿದ್ದು ಹೋಗಿದ್ದು, ಇದು ಸೋಣಂದೂರು ನಿವಾಸಿ ಕೆಎಸ್.ಆರ್.ಟಿ.ಸಿ ಬಸ್ ಸಿಬ್ಬಂದಿಯಾದ ಅಶ್ರಫ್ ಅವರಿಗೆ ಸಿಕ್ಕಿದೆ.

ಅವರು ಆ ಪರ್ಸಲ್ಲಿದ್ದ ನಂಬರಿಗೆ ಕರೆ ಮಾಡಿ ಪ್ರಯಾಣಿಕರನ್ನು ಸಂಪರ್ಕಿಸಿ ಅವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಪರ್ಸಲ್ಲಿ ರೂ.12000 ನಗದು ಮತ್ತು ಅಗತ್ಯ ದಾಖಲೆಗಳಿದ್ದವು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *