Sat. Apr 19th, 2025

Ujire: ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜೀವನ, ಸಾಧನೆ ಯುವಜನತೆಗೆ ಮಾದರಿ ವಿಶೇಷ ಉಪನ್ಯಾಸ ಕಾರ್ಯಕ್ರಮ – ವಿವೇಕ್ ಆಳ್ವರಿಂದ ಹೆಗ್ಗಡೆಯವರ 76ನೇ ಜನ್ಮ ದಿನದ ಪ್ರಯುಕ್ತ 76 ಸಸಿಗಳ ವಿತರಣೆ – ಕು.ರಚನಾ ಗುಡಿಗಾರ್ ರವರ ಆರೋಹಣ ಪೊಡ್ ಕಾಸ್ಟ್ ನ ಪೋಸ್ಟರ್ ಬಿಡುಗಡೆ

ಉಜಿರೆ:(ನ.25) ಎಸ್‌.ಡಿ.ಎಂ. ಕಾಲೇಜಿನ ಸಹಯೋಗದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನದ ಶುಭಾವಸರದಲ್ಲಿ ಹೆಗ್ಗಡೆಯವರ ಜೀವನ, ಸಾಧನೆ ಯುವಜನತೆಗೆ ಮಾದರಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ನ. 25 ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: 🟣ಇಂದಬೆಟ್ಟು: ಪ್ರತಿಷ್ಠಿತ ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ರವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿ, ಹೆಗ್ಗಡೆಯವರ 76ನೇ ಜನ್ಮ ದಿನದ ಸಂಭ್ರಮದ ನಿಮಿತ್ತ 76 ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಕಾಲೇಜು ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕು.ರಚನಾ ಗುಡಿಗಾರ್ ರವರ ಆರೋಹಣ ಪೊಡ್ ಕಾಸ್ಟ್ ನ ಪೋಸ್ಟರ್ ನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಅತಿಥಿಗಳಾಗಿ ಎಸ್.ಡಿ.ಎಂ.ಇ. ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಉಜಿರೆ ಎಸ್.ಡಿ.ಎಂ.ಇ. ಸೊಸೈಟಿ ಐಟಿ ಮತ್ತು ಹಾಸ್ಟೆಲ್ ಮ್ಯಾನೇಜ್‌ ಮೆಂಟ್ ನ ಸಿಇಒ ಪೂರನ್ ವರ್ಮ, ಇಂಜಿನಿಯರ್ ಕಾಲೇಜು ಪ್ರಾಂಶುಪಾಲ ಅಶೋಕ್ ರವರು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎನ್.ಎಸ್.ಎಸ್ ವಿಭಾಗದ ಮಹೇಶ್ ಕುಮಾ‌ರ್ ಶೆಟ್ಟಿ ನಿರೂಪಿಸಿ, ಪಿಜಿ ವಿಭಾಗದ ಡೀನ್ ವಿಶ್ವನಾಥ್ ಪಿ. ಧನ್ಯವಾದವಿತ್ತರು.

Leave a Reply

Your email address will not be published. Required fields are marked *