Tue. Apr 15th, 2025

Bantwal: ಹಿಂದೂ ಹೆಸರಲ್ಲಿ ಯುವತಿಯೊಂದಿಗೆ ಕ್ರಿಶ್ಚಿಯನ್‌ ಯುವಕನ ಪ್ರೀತಿಯ ನಾಟಕ – ಮದುವೆ ಭರವಸೆ ಕೊಟ್ಟು ದೈಹಿಕ ಸಂಪರ್ಕ – ಖಾಸಗಿ ಫೋಟೋ ಬಳಸಿ ಯುವತಿಗೆ ಬ್ಲಾಕ್‌ಮೇಲ್ – ಕಾಮುಕನ ಬಣ್ಣ ಬಯಲಾಗಿದ್ದು ಯಾರಿಂದ ಗೊತ್ತಾ?!

ಬಂಟ್ವಾಳ :(ನ.26) ಹಿಂದೂ ಯುವತಿಯೋರ್ವಳಿಗೆ ತಾನೂ ಹಿಂದೂ ಎಂದು ನಂಬಿಸಿ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕಕಕ್ಕೆ ಪ್ರೇರೇಪಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಕ್ರಿಶ್ಚಿಯನ್ ಯುವಕನ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: 🌀ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

ಯುವತಿಯನ್ನು ಮಂಗಳೂರು ನಿವಾಸಿ ಹಿಂದೂ ಯುವತಿ ಎನ್ನಲಾಗಿದೆ. ಆರೋಪಿಯನ್ನು ಬಂಟ್ವಾಳ ತಾಲೂಕಿನ ಮಾಣಿಲ ನಿವಾಸಿ ವಾಲ್ಟರ್ ಡಿಸೋಜ ಎಂದು ಗುರುತಿಸಲಾಗಿದೆ.

ಆರೋಪಿ ವಾಲ್ಟರ್ ಡಿಸೋಜ 2016 ರಿಂದ ಈ ರೀತಿಯಾಗಿ ವಂಚನೆ ಮಾಡುತ್ತಿದ್ದಾನೆ, ಈ ವಿಷಯ ಇತ್ತೀಚೆಗೆ ಆತನ ತಂಗಿಯ ಮುಖಾಂತರ ಅವನು ಹಿಂದೂ ಅಲ್ಲ ಕ್ರಿಶ್ಚನ್ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಈತ ನಕಲಿ ಗುರುತು ಪತ್ರಗಳ ಬಳಕೆಯಿಂದ, ಹೋಟೆಲ್ ರೂಮ್‌ಗಳಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ, ಇತ್ತೀಚೆಗೆ ಆಕೆಯ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡುವ ಪ್ರಯತ್ನ ಮಾಡಿದ್ದಾನೆ. ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಗೆ ಕಾನೂನು ತಿಳುವಳಿಕೆ ಇಲ್ಲದ ಕಾರಣ ತಡವಾಗಿ ತಮ್ಮ ಹಿತೈಷಿಗಳ ಸಹಾಯದಿಂದ ದೂರು ನೀಡಿದ್ದಾರೆ. ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಧಾರಗಳನ್ನು ದೂರಿನ ಜೊತೆ ಪಾಂಡೇಶ್ವರ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *