Thu. Nov 28th, 2024

Belthangady: ವಕೀಲರ ಭವನದಲ್ಲಿ ಸಂವಿಧಾನ ದಿನಾಚರಣೆ

ಬೆಳ್ತಂಗಡಿ:(ನ.26) ವಕೀಲರ ಸಂಘ (ರಿ.) ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಇದರ ನೇತೃತ್ವದಲ್ಲಿ ಇಂದು 75ನೇ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: ⭕ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು!!

ಈ ಕಾರ್ಯಕ್ರಮವನ್ನು ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀ ಮನು ಬಿ.ಕೆ ಭಾರತ ಸಂವಿಧಾನದ ಪುಸ್ತಕ ಹಾಗೂ ಡಾ ಬಿ ಆರ್ ಅಂಬೇಡ್ಕರ್ ರವರಿಗೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಉದ್ಘಾಟಿಸಿ ಸಂವಿಧಾನದ ಪೀಠಿಕೆ ಯನ್ನು ನೆರೆದಿದ್ದ ಎಲ್ಲ ವಕೀಲರಿಗೆ ಬೋಧಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ಸಂವಿಧಾನದ ಮಹತ್ವ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು.

ವೇದಿಕೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ ಕೆ ಹಾಗೂ ಯುವ ವಕೀಲರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ ಉಪಸ್ಥಿತರಿದ್ದರು. ಬೆಳ್ತಂಗಡಿ ವಕೀಲರ ಹಿರಿಯ ಸಮಿತಿ ಅಧ್ಯಕ್ಷರಾದ ಅಲೋಸಿಸ್ ಎಸ್ ಲೋಬೋ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂವಿಧಾನದ ತಿದ್ದುಪಡಿಗಳ ಬಗ್ಗೆ ಮತ್ತು ಸಂವಿಧಾನದ ವಾಸ್ತವಿಕತೆಯ ಬಗ್ಗೆ ವಿವರಿಸಿದ್ದರು.


ಈ ಕಾರ್ಯಕ್ರಮದಲ್ಲಿ ಯುವ ವಕೀಲರಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಸ್ಪರ್ದಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ರಸಪ್ರಶ್ನೆಯ ವಿಜೇತರ ಪಟ್ಟಿಯನ್ನು ಯುವ ವೇದಿಕೆ ಕಾರ್ಯದರ್ಶಿ ಶ್ರೀಮತಿ ಜೋಶ್ನಾ ವೆಲೋನ ಕೊರೆಯ ವಾಚಿಸಿದರು.

ಈ ಕಾರ್ಯಕ್ರಮದಲ್ಲಿ ಯುವ ವಕೀಲರಾದ ಜೋಬಿ ಜೋಯ್ ಎಲ್ಲರನ್ನು ಸ್ವಾಗತಿಸಿ, ಶ್ವೇತಾ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹರ್ಷಿತ್ ಹೆಚ್ ನೆರವೇರಿಸಿದರು.

Leave a Reply

Your email address will not be published. Required fields are marked *