ಬೆಳ್ತಂಗಡಿ:(ನ.26) ವಕೀಲರ ಸಂಘ (ರಿ.) ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಇದರ ನೇತೃತ್ವದಲ್ಲಿ ಇಂದು ಯುವ ವಕೀಲರಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ: ⚖Aries to Pisces: ಅಶುಭ ವಾರ್ತೆಯಿಂದ ವೃಷಭ ರಾಶಿಯವರ ಇಂದಿನ ಕಾರ್ಯವೆಲ್ಲ ಹಾಳಾಗಬಹುದು!!!
ಈ ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್ ಆಗಿ ಬಹಳ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಭಾಗವಹಿಸಿದ ಸ್ಪರ್ಧಿಗಳಿಗೆ ಸ್ವತಃ ಬಹುಮಾನವನ್ನು ವಕೀಲರ ಸಂಘದ ಸದಸ್ಯರಾದ ಶ್ರೀ ಶ್ರೀ ಕೃಷ್ಣ ಶೆಣೈ ಇವರು ನೀಡಿದರು.
ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕ್ಕಡ , ಹಿರಿಯ ನ್ಯಾಯವಾದಿಯಾದ ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶ್ರೀ ವೈ ರಾಧಾಕೃಷ್ಣ, ಶ್ರೀಮತಿ ಸ್ವರ್ಣಲತಾ ಎ, ಕೋಶಾಧಿಕಾರಿಯಾದ ಶ್ರೀ ಪ್ರಶಾಂತ್ ಎಂ
ಹಾಗೂ ಮನೋಹರ್ ಕುಮಾರ್ ಎ ವಕೀಲರು, ಯುವ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ , ಶ್ರೀಮತಿ ವೀಕ್ಷಿತಾ , ಶ್ರೀಮತಿ ಉಷಾ ಎನ್ ಜಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಯುವ ವಕೀಲರ ವೇದಿಕೆಯ ಕಾರ್ಯದರ್ಶಿಯಾದ ಶ್ರೀಮತಿ ಜೋಸ್ನಾ ವೆಲೋನ ಕೊರೆಯ ಎಲ್ಲರನ್ನು ಸ್ವಾಗತಿಸಿ, ವಕೀಲರ ಸಂಘ(ರಿ.) ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ ಕೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.