Wed. Apr 16th, 2025

Kumbale: ಲವ್ವರ್‌ ಗೋಸ್ಕರ ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿ ಪರಾರಿಯಾದ ಪುತ್ರಿ!!

ಕುಂಬಳೆ:(ನ.27) ಪ್ರಿಯತಮನಿಗೋಸ್ಕರ ಯುವತಿಯೊಬ್ಬಳು ತನ್ನ ತಂದೆ ಮತ್ತು ತಾಯಿಯನ್ನು ಮನೆಯ ಕೊಠಡಿಯಲ್ಲಿ ಕೂಡಿ ಹಾಕಿ, ಕಾರು ಸಹಿತ ಪರಾರಿಯಾದ ಘಟನೆ ನಡೆದಿದೆ.

ಇದನ್ನೂ ಓದಿ: 💠ಮಂಗಳೂರು: ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

19ರ ಹರೆಯದ ಕಯ್ಯಾರು ಶಾಂತಿಯೋಡು ನಿವಾಸಿಯ ಯುವತಿಯು ನ. 25ರಂದು ಪ್ರಿಯತಮನೊಂದಿಗೆ ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ.


ಪೋಷಕರು ನೀಡಿದ ದೂರಿನಂತೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಯುವತಿ ಕೊಂಡೋಯ್ದ ಕಾರು ಬಂದ್ಯೋಡು ಮೀಪಿರಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.


ಯುವತಿ ಓರ್ವ ಯುವಕನನ್ನು ಪ್ರೀತಿಸುತ್ತಿದ್ದು, ಈ ಮಧ್ಯೆ ಈಕೆಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲಾಗಿತ್ತು. ಆದರೆ ಈ ವಿವಾಹ ಸಂಬಂಧವು ಕೇವಲ ಎರಡು ತಿಂಗಳೊಳಗೆ ಮುರಿದು ಬಿದ್ದಿತ್ತು.

ಮದುವೆ ಮುರಿದು ಬಿದ್ದ ಬೆನ್ನಲ್ಲೇ ಯುವತಿ ಒಮ್ಮೆ ನಾಪತ್ತೆಯಾಗಿ ಮರುದಿನ ಮನೆಗೆ ವಾಪಸಾಗಿದ್ದಳು ಎನ್ನಲಾಗಿದೆ. ಇದೀಗ ಆ ಯುವತಿಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲು ಮನೆಯವರು ಆಲೋಚಿಸುತ್ತಿರುವಂತೆಯೇ ಯುವತಿಯು ತನ್ನ ತಂದೆ,

ತಾಯಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬಳಿಕ ಪರಾರಿಯಾಗಿದ್ದಾಳೆಂದು ಎಂದು ಪೊಲೀಸರಿಗೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *