Wed. Apr 16th, 2025

Mangalore: ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

ಮಂಗಳೂರು:(ನ.27) ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಸೋಮವಾರ ಸೇವೆಯಾಟದೊಂದಿಗೆ ಆರಂಭವಾಯಿತು. ದೇಗುಲದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಕಲಾವಿದರಿಗೆ ಅವರು ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: 🟠ಉಜಿರೆ: ಆಮಂತ್ರಣ ವೇದಿಕೆ ತಾಲೂಕು ಪದಗ್ರಹಣ ಮತ್ತು

ಮೊಕ್ತೇಸರ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ,

ಹರಿನಾರಾಯಣದಾಸ ಅಸ್ರಣ್ಣ, ದೇವಸ್ಥಾನದ ತಂತ್ರಿ ವೇದವ್ಯಾಸ ತಂತ್ರಿ, ಹರಿ ಉಡುಪ ಮೂಡುಮನೆ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ರಮಾನಾಥ್ ರೈ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚರಿತಾಬೆಲ್, ಅಧ್ಯಕ್ಷ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.

ಗೆಜ್ಜೆ ಮುಹೂರ್ತದ ಪೂರ್ವಭಾವಿಯಾಗಿ ದೇವಾಲಯದ ಒಳಗೋಪುರದಲ್ಲಿ ಆರು ಮೇಳಗಳ ಪ್ರಮುಖ ಭಾಗವತರ ಹಿನ್ನಲೆಯಲ್ಲಿ ತಾಳಮದ್ದಳೆ ನಡೆಯಿತು. ರಥಬೀದಿಯಲ್ಲಿ ಆರು ಮೇಳಗಳ ದೇವರುಗಳ ಚೌಕಿ ಪೂಜೆಯ ನಂತರ ಬಯಲಾಟ ನಡೆಯಿತು.

Leave a Reply

Your email address will not be published. Required fields are marked *