Tue. Apr 8th, 2025

Moodbidre: ಮೂಡಬಿದಿರೆಯಲ್ಲಿ ಲವ್ ಜಿಹಾದ್ – ಡ್ರಗ್‌ ಪೆಡ್ಲರ್‌ ಸಿನಾನ್‌ ಬಲೆಗೆ ಬಿದ್ದ ಜೈನ ಯುವತಿ – ಜೊತೆಗೆ ಸುತ್ತಾಟ, ಮೈ-ಕೈ ಮುಟ್ಟಿ ಚಕ್ಕಂದ – ಬಜರಂಗದಳದ ಮಿಂಚಿನ ಕಾರ್ಯಾಚರಣೆ!

ಮೂಡುಬಿದಿರೆ:(ನ.27) ಮೂಡುಬಿದಿರೆಯ ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕ ಚೆಲ್ಲಾಟವಾಡುತ್ತಿರುವ ವೇಳೆ ಬಜರಂಗದಳದ ಮಿಂಚಿನ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ: 💠ಇಂದಬೆಟ್ಟು: ದಿ| ತುಷಾರ್ ಗೌಡ ರವರ ನುಡಿನಮನ ಕಾರ್ಯಕ್ರಮದಲ್ಲಿ ಖರ್ಚು ಕಳೆದು ಉಳಿದ 40,305 ಮೊತ್ತವನ್ನು

ಈ ಸಮಯ ಸಿನಾನ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಇಬ್ಬರು ಕೆಫೆಯಲ್ಲಿ ಗ್ಲಾಸ್ ಅಳವಡಿಸಲಾಗಿರುವ ಸ್ಥಳದಲ್ಲಿ ಕೂತು ಮೈ-ಕೈಮುಟ್ಟಿಕೊಂಡು, ಚಕ್ಕಂದ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಸದ್ಯ ಇದೂ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕವಾಗಿ ಆಕ್ರೋಶ ಕೇಳಿಬಂದಿದೆ.

ಈ ಸಿನಾನ್‌ ಡ್ರಗ್ ಪೆಡ್ಲರ್ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಈತ ಲವ್ ಜಿಹಾದ್ ಯತ್ನ ನಡೆಸಿದ್ದಾನೆ ಎನ್ನುವ ವಿಚಾರ ಕೇಳಿಬಂದಿದೆ.

ಮುಂದಿನ ದಿನಗಳಲ್ಲಿ ಮೂಡುಬಿದಿರೆಯ ಯುವತಿಯರು ಜಾಗರೂಕರಾಗಿರಬೇಕು. ತಪ್ಪಿದಲ್ಲಿ ಲವ್ ಜಿಹಾದ್ ಗೆ ಬಲಿಯಾಗಿ ತಮ್ಮ ಜೀವನವನ್ನು ಸರ್ವನಾಶ ಮಾಡಿಕೊಳ್ಳಬಾರದು ಎಂದು ಬಜರಂಗದಳ ಪ್ರಮುಖರು ಕರೆ ನೀಡಿರುತ್ತಾರೆ.

Leave a Reply

Your email address will not be published. Required fields are marked *