Mon. Apr 7th, 2025

Venur: ನದಿಗೆ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರುಪಾಲು..!!!!

ವೇಣೂರು:(ನ.27)ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂಬುವರಾಗಿದ್ದಾರೆ.

ವೇಣೂರು ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು