ಬೆಂಗಳೂರು:(ನ.28) ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ನ.27 ರಂದು ಗ್ರಾಮ ಪಂಚಾಯತಿ ನೌಕರರನ್ನು ಸರಕಾರದ ವ್ಯವಸ್ಥೆ ಅಡಿ ಸಿ ಮತ್ತು ಡಿ ದರ್ಜೆಯ ಸ್ಥಾನವನ್ನು ನೀಡಿ ವೇತನ ಶ್ರೇಣಿ ನಿಗದಿಪಡಿಸಬೇಕು ಎಂಬ ಮೂಲ ಬೇಡಿಕೆ ಯನ್ನು ಈಡೇರಿಸುವಂತೆ ಹಾಗೂ ಪ್ರತ್ಯೇಕ ಸಮಿತಿ ರಚಿಸುವಂತೆ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರು ಫ್ರೀಡಂ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ⭕ಬೆಂಗಳೂರು : ಹಿಂದೂ ದೇವತೆಗಳ ಬಗ್ಗೆ ಆಶ್ಲೀಲ ಪದ ಬಳಸಿದ ಕೋಮು ಕ್ರಿಮಿ ಅಂಜುಂ ಶೇಖ್ ಅಂದರ್!
ಮಾನ್ಯ ಸಚಿವರ ಸೂಚನೆಯಂತೆ, ಮನವಿ ಸ್ವೀಕರಿಸಲು ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿಯವರು ಆಗಮಿಸಿದ್ದು ಹಾಗೂ ಕರ್ನಾಟಕ ಸರಕಾರ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಯನ್ನು ಆಲಿಸುವ ಬಗ್ಗೆ ದಿನಾಂಕ 04/12/2024 ರಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ
ಆಯುಕ್ತಾಲಯದಲ್ಲಿ ಸಭೆ ನಿಗದಿಪಡಿಸಿದ ಸೂಚನಾ ಪತ್ರವನ್ನು ಪಂಚಾಯತ್ ರಾಜ್ ಆಯುಕ್ತಾಲಯದ ಅಧಿಕಾರಿಗಳಾದ ಶ್ರೀ ಅಂಬರೀಶ್ ನಿರ್ದೇಶಕರು ಪಂಚಾಯತ್ ರಾಜ್ ಆಯುಕ್ತಾಲಯ, ಹಾಗೂ ಶ್ರೀ ಚಂದ್ರಪ್ಪ ಸಹಾಯಕ ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ. ಇವರು ಪ್ರತಿಭಟನಾ ಸ್ಥಳದಲ್ಲಿ ನೀಡಿರುತ್ತಾರೆ.
ಹಾಗೂ ಮಾನ್ಯ ಸಚಿವರು ಹಾಗೂ ಅಧಿಕಾರಿಗಳು ನಿಮ್ಮ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸುವ ಬಗ್ಗೆ ತಾವು ಸರಕಾರ ನಿಗದಿಪಡಿಸಿದ ಸಭೆಯಲ್ಲಿ ಭಾಗವಹಿಸಬೇಕು ಹಾಗೂ ಈ ಪ್ರತಿಭಟನೆಯನ್ನು ಕೈ ಬಿಡಬೇಕು ಎಂದು ಒತ್ತಾಯವನ್ನು ಮಾಡಿದರು. ಹಾಗಾಗಿ ಸಂಘದಿಂದ ಅನಿರ್ದಿಷ್ಟವಾದಿ ಹೋರಾಟವನ್ನು ರಾಜ್ಯ ಮಟ್ಟದ,
ಜಿಲ್ಲಾ ಮಟ್ಟದ, ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆ ನಡೆಸಿ ಎಲ್ಲರ ತೀರ್ಮಾನದಂತೆ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಹಾಗೂ ಈ ದಿನ ದಿನಾಂಕ 28/11/2024 ರಂದು ಮಾನ್ಯ ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಸರ್ ಇವರ ಮನೆಗೆ ಭೇಟಿ ನೀಡಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ
ಗ್ರಾಮ ಪಂಚಾಯತ್ ನೌಕರರ ಬೇಡಿಕೆಯನ್ನು ಮೊದಲ ಆದ್ಯತೆಯಲ್ಲಿ ಪರಿಹರಿಸುವಂತೆ ರಾಜ್ಯಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ ರವರು ಕಲಬುರ್ಗಿ ಜಿಲ್ಲೆಯ ಮುಖಂಡರು ಸಚಿವರ ಆತ್ಮೀಯ ರಾಗಿರುವ ಶ್ರೀ ಶಿವರಾಜ್ ಪಾಟೀಲ್ಅವರೊಂದಿಗೆ ಜೊತೆಗೂಡಿ ವರದಿಯನ್ನು ನೀಡಿ ಒತ್ತಾಯವನ್ನು ಮಾಡಿದರು.
ಈ ಬಗ್ಗೆ ಸಚಿವರು ಪ್ರತಿಕ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಗಂಗಾಧರ ನಾಯ್ಕ, ಉಡುಪಿ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಶ್ರೀ ಹೇಮಚಂದ್ರ ನಂದಳಿಕೆ ಉಪಸ್ಥಿತರಿದ್ದರು.