ಉಡುಪಿ:(ನ.28) ಆದಿ ಉಡುಪಿ ಹಳೆ ಆರ್.ಟಿ.ಓ ಕಚೇರಿ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವಕನ ಶವವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ⭕ಉಳ್ಳಾಲ: ಕೊಲ್ಯದ ಜಾಯ್ ಲ್ಯಾಂಡ್, ಕೋಟೆಕಾರುವಿನ ಸ್ಟೆಲ್ಲಾ ಮೇರೀಸ್ ಶಾಲೆಗಳಿಗೆ ಕನ್ನ!
ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕೊಳೆತ ಶವವನ್ನು ಕೆಳಗಿಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾದರು.
ಈ ವ್ಯಕ್ತಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಶವವು ಕೊಳೆತು ಹೋಗಿದ್ದು, ವ್ಯಕ್ತಿ ಮೃತಪಟ್ಟು ಏಳು ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಮೃತನ ಹೆಸರು ವಿಳಾಸ ತಿಳಿದುಬಂದಿಲ್ಲ, ಹೊರ ರಾಜ್ಯದ ವಲಸೆ ಕಾರ್ಮಿಕನಂತೆ ಕಂಡುಬರುತ್ತಿದೆ.