ಧರ್ಮಸ್ಥಳ :(ನ. 29)ಧರ್ಮಸ್ಥಳ ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.
ಎಲ್ಲಾ ಕಡೆ ಹುಡುಕಾಟವು ನಡೆಯಿತು. ಇಂದು ಬೆಳಗ್ಗೆ ಮನೆಯ ಹಿಂಬದಿ ಇರುವ ಬಾವಿಯೊಳಗೆ ಶವ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತಕ್ಷಣ
ಶೌರ್ಯ ತಂಡಕ್ಕೆ ಪೊಲೀಸ್ ಠಾಣೆಯಿಂದ ಮಾಹಿತಿ ಬಂದ ಕೂಡಲೇ ತುರ್ತು ತಂಡದ ಸ್ವಯಂ ಸೇವಕರೆಲ್ಲರು ಸ್ಥಳಕ್ಕೆ ಬಂದು ಶವವನ್ನು
ಬಾವಿಯಿಂದ ಮೇಲಕ್ಕೆ ಎತ್ತಿ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಈ ಸಂದರ್ಭದಲ್ಲಿ ಧರ್ಮಸ್ಥಳ ಘಟಕದ ಮಾಸ್ಟರ್ ಸ್ನೇಕ್ ಪ್ರಕಾಶ್ ನಳಿನ್ ಕುಮಾರ್ ಇದ್ದರು.