ಬಂಟ್ವಾಳ :(ನ.29) ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ
ಗುರುಗಳು ಸಾಮಾಜಿಕ ಪ್ರಜ್ಞೆಯ ಅದ್ವೈತಿ ಸಂತರಂತೆ, ಎಲ್ಲರೂ ದೇವರ ಸೃಷ್ಟಿ, ಸರ್ವಜೀವಗಳಲ್ಲಿ ಸಮಾನತೆಯನ್ನೂ, ವಿಶ್ವಮಾನವತೆಯನ್ನೂ ಗುರುಗಳು ಪ್ರತಿಪಾದಿಸಿದರು ಎಂದು ರಂಗಭೂಮಿ, ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ತಿಳಿಸಿದರು.
ಇದನ್ನೂ ಓದಿ: 🛑ಉಡುಪಿ: ವಿವಾಹಿತೆ ನಾಪತ್ತೆ!!
ಅವರು ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಕುಡುಪು ರಾಜೇಶ್ ಬಿ.ಮೆಸ್ಕಾಂ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 22 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ್ ಕುಂಪಲ, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೆನಾಡು,ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ,
ಸದಸ್ಯರಾದ, ಪ್ರಶಾಂತ್ ಏರಮಲೆ,ಸುದೀಪ್ ರಾಯಿ, ಯತೀಶ್ ಬೊಳ್ಳಾಯಿ,ಸೂರಜ್ ತುಂಬೆ, ಜಗನ್ನಾಥ್ ಸುವರ್ಣ ಕಲ್ಲಡ್ಕ, ಹರೀಶ್ ಅಜೆಕಲ,ಅರ್ಜುನ್ ಅರಳ,ಮೆಸ್ಕಾಂ ಕುಲಶೇಖರದ ಮೇಲ್ವಿಚಾರಕರಾದ ಬಾಲಕೃಷ್ಣ, ಜಯಪ್ರಕಾಶ್ ಹಾಗೂ ಮೆಸ್ಕಾಂ ವಾಮಂಜೂರು ಶಾಖೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಗುರುಸಂದೇಶ ನೀಡಿದ ಸ್ಮಿತೇಶ್ ಬಾರ್ಯ ಹಾಗೂ ಪ್ರಜಿತ್ ಅಮೀನ್ ಇವರನ್ನು ರಾಜೇಶ್ ಬಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.