Thu. Dec 26th, 2024

Belthangady : ವೇಣೂರು ಸ. ಪ.ಪೂ.ಕಾಲೇಜಿಗೆ ಹೊಸ ಪ್ರೊಜೆಕ್ಟರ್ ಕೊಡುಗೆ

ಬೆಳ್ತಂಗಡಿ:(ನ.29) ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ 1999-2001 ಸಾಲಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಪೂರ್ವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ತರಗತಿ ಕೊಠಡಿಗೆ ಕೊಡುಗೆಯಾಗಿ ನೀಡಿದ ಹೊಸ ಪ್ರೊಜೆಕ್ಟರನ್ನು ಕಾಲೇಜಿನ ವಾರ್ಷಿಕೋತ್ಸವದಂದು ಹಸ್ತಾಂತರಿಸಲಾಯಿತು.

ವಿದ್ಯಾರ್ಥಿಗಳಾದ ನವೀನ್ ಪೂಜಾರಿ ಪಚ್ಚೆರಿ, ಜಗನ್ನಾಥ ದೇವಾಡಿಗ ವೇಣೂರು, ಲೋಕೇಶ್ ಪೂಜಾರಿ ಗುಂಡೂರಿ, ವೀಣಾ ಎಸ್ ಹೆಗ್ಡೆ ಕಾರ್ಕಳ ಇವರು ಈ ಕೊಡುಗೆಯನ್ನು ನೀಡಿದರು.ಸಂಸ್ಥೆಯ ಪ್ರಾಚಾರ್ಯ ಗಂಗಾಧರ್ ಹಳೆ ವಿದ್ಯಾರ್ಥಿಗಳು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ವಿಜ್ಞಾನ ವಿಭಾಗದ ಪ್ರಸಕ್ತ ಹಾಗೂ ಮುಂದೆ ವ್ಯಾಸಾಂಗ ಮಾಡಲಿರುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗೆ ಅನುಕೂಲವಾಗಲಿದೆ ಎಂದರು.

ಸಮಾರಂಭದಲ್ಲಿ ಪ್ರೊಜೆಕ್ಟರ್ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವತಿಯಿಂದ ಪ್ರಾಚಾರ್ಯರು, ಅತಿಥಿಗಳು ಶಾಲು ಹೊದಿಸಿ ಅಭಿನಂದಿಸಿದರು. ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಜಗನ್ನಾಥ ದೇವಾಡಿಗ, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ 23 ವರ್ಷಗಳ ನಂತರ ನಾವೆಲ್ಲ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಸಂಸ್ಥೆಗೆ ಏನಾದರು ನೀಡಬೇಕೆಂದು ಆಲೋಚಿಸಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರೊಜೆಕ್ಟರ್ ರನ್ನು ಕೊಡುಗೆಯಾಗಿ ನೀಡಿರುತ್ತೇವೆ.

ಸಹಕಾರ ನೀಡಿದ ನಮ್ಮ ಸಹಪಾಠಿಗಳಾದ ಮಹಮ್ಮದ್ ಶಬ್ಬೀರ್ ದುಬೈ ವೇಣೂರು, ಸುಜಾತ ಆಸ್ಟ್ರೇಲಿಯಾ , ಅರ್ಚನಾ ಅನೂಪ್ ಶೆಟ್ಟಿ ಮಂಗಳೂರು, ರಾಜೇಶ್ ಪೈ ವೇಣೂರು, ದಿವ್ಯಾ ಪಿ ರೈ ಪುತ್ತೂರು, ಕುಶಲತಾ ಮಂಗಳೂರು, ಪೂರ್ಣಿಮಾ ಮಡಂತ್ಯಾರ್, ಶ್ಯಾಮಲಾ ಅಂಡಿಂಜೆ, ಸುಧಾಕರ ಕುಲಾಲ್ ಪೆರ್ಮುಡ, ಜಯಶ್ರೀ ಸಾಂಗ್ಲಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *