Thu. Dec 26th, 2024

Belthangady: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ – ವಿಷ ಸೇವಿಸಿ ಅಪ್ರಾಪ್ತ ಯುವತಿ ಸಾವು ಪ್ರಕರಣ – ಪ್ರವೀಣ್‌ ಗೌಡ ಗೆ ಆಕೆ ಮಾಡಿದ ಕೊನೆಯ ಮೆಸೇಜ್‌ ಏನು ?! – ಕೊನೆಯದಾಗಿ ಆಕೆ ಆತನಿಗೆ ಮೆಸೇಜ್‌ ನಲ್ಲಿ ಹೇಳಿದ್ದೇನು?! – ಅಷ್ಟು ಬೇಡಿಕೊಂಡರೂ ಕರಗಲಿಲ್ವ ಆತನ ಮನಸ್ಸು?!!! – ಆಕೆಗೆ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ನಾ ಪ್ರವೀಣ್?!!

ಬೆಳ್ತಂಗಡಿ(ನ.29) : ಪ್ರೀತಿಸುತ್ತಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆಂದು ನೊಂದುಕೊಂಡ ಅಪ್ರಾಪ್ತ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು, ಆಹಾರ- ಔಷಧ ಕಿಟ್ ವಿತರಣೆ

ಹೃಷ್ವಿ(17) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆಯ ವಿವರ:

ಯುವತಿಗೆ ತನ್ನ ಸಂಬಂಧಿ ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತನ ಜೊತೆಗೆ ಲವ್ ಆಗಿದೆ. ಮೊಬೈಲ್ ಮೂಲಕವೇ ಪ್ರೀತಿಯನ್ನು ಗಟ್ಟಿಗೊಳಿಸಿದ ಯುವತಿ ಮುಂದೆ ಅವನನ್ನೇ ಅರ್ಧಾಂಗಿ ಎಂದು ಸ್ವೀಕರಿಸಿದ್ದಾಳೆ. ಪ್ರವೀಣನೂ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದು, ಊರಿಗೆ ಬಂದಾಗ ಮೀಟ್ ಮಾಡುತ್ತಿದ್ದ. ಕೆಲವೇ ತಿಂಗಳ ಲವ್​ನಲ್ಲಿ ಇವರಿಬ್ಬರ ಬಾಂಧವ್ಯ ಕೂಡ ಗಟ್ಟಿಯಾಗಿತ್ತು. ಕೇವಲ ಎಂಟು ತಿಂಗಳ ಪ್ರೇಮದಲ್ಲಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು.

ಈ ಸಂದರ್ಭದಲ್ಲಿ ಯುವತಿಗೆ ಪ್ರವೀಣ್ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನೆ. ಯುವತಿ ಮನೆಯವರು ವಯಸ್ಸು ಪೂರ್ತಿಯಾದಾಗ ಮದುವೆ ಮಾಡಿ ಕೊಡೋದಾಗಿ ಹೇಳಿದ್ದಾರೆ. ಪ್ರೀತಿ ಸಾಗುತ್ತಿದ್ದಾಗ ಪ್ರವೀಣ್​ಗೆ ಯಾಕೋ ಈಕೆಗೆ ಜೊತೆಗಿನ ಸಾಂಗತ್ಯ ಬೋರ್ ಎನಿಸಿದೆ. ದೂರ ಆಗೋಣ ಬ್ರೇಕಪ್ ಅಂತಾ ಹೇಳಿದ್ದಾನೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರವೀಣ ಕೈ ಕೊಡುತ್ತಿರೋದನ್ನು ಸಹಿಸಲಾಗದೆ ಯುವತಿ ಇಲಿ ಪಾಷಾಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನವೆಂಬರ್ 20ರಂದು ಇಲಿ ಪಾಷಾಣವನ್ನು ತೆಗೆದುಕೊಂಡಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ನವೆಂಬರ್ 26 ರ ಮಂಗಳವಾರ ಸಾವನ್ನಪ್ಪಿದ್ದಾಳೆ. ಪ್ರವೀಣ್ ಯುವತಿಯ ತಾಯಿ ಬಳಿ ಈ ಹಿಂದೆಯೇ ದೇವರ ಆಣೆ ಹಾಕಿ ಆಕೆಯನ್ನೇ ಮದುವೆಯಾಗೋದಾಗಿ ಹೇಳಿದ್ದಾನೆ. ಪ್ರವೀಣನ ಮಾತನ್ನು ನಂಬಿ ಯುವತಿಯ ತಾಯಿಯೂ ಪ್ರವೀಣನ ಜೊತೆಗೆ ತಿರುಗಾಡೋಕೆ ಅನುಮತಿ ನೀಡಿದ್ದಾರೆ‌. ನವೆಂಬರ್ ಇಪ್ಪತ್ತರ ಮಧ್ಯರಾತ್ರಿ ವಾಂತಿ ಮಾಡಿಕೊಂಡಾಗಲೂ ಯುವತಿ ತಾಯಿಯ ಜೊತೆ ಪ್ರವೀಣನಿಂದ ಆದ ಮೋಸದ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಪ್ರವೀಣ್ ತನ್ನನ್ನು ಬಳಸಿಕೊಂಡೊರೋದಾಗಿ ಹೇಳಿದ್ದಾಳೆ. ಇತ್ತ ಯುವತಿ ಸಾವನ್ನಪ್ಪುತ್ತಲೇ ಆರೋಪಿ ಪ್ರವೀಣ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.

ಕೊನೆಯದಾಗಿ ಪ್ರವೀಣ್‌ ಗೌಡ ಗೆ ಆಕೆ ಮಾಡಿದ ಮೆಸೇಜ್‌ ಏನು?!:‌

ಕೊನೆಯದಾಗಿ ಆಕೆ ಆತನಿಗೆ ( ಮಂಡೆ ಬೆಚ್ಚ ಮಲ್ಪೋಡ್ಚಿ, ಬೇಗಡೆ ಪೋಪೆ ಯಾನ್‌ ಈರೆನ್‌ ಪೋಡಿಪವೊಂದ್‌ ಇಜ್ಜಿ, ಪ್ರಾಮಿಸ್‌ ಸೈಪೆ) ನೀನು ಟೆನ್ಷನ್‌ ಮಾಡ್ಬೇಡ, ನಾನು ಬೇಗನೇ ಹೋಗ್ತೇನೆ. ನಾನು ನಿನಗೆ ಹೆದರಿಸುತ್ತಿಲ್ಲ, ಪ್ರಾಮಿಸಿ ಸಾಯ್ತೇನೆ ನಾನು, ಎಂದು ತುಳುವಲ್ಲಿ ಚಾಟ್‌ ಮಾಡ್ಕೊಂಡಿದ್ದಾರೆ. ಅದಕ್ಕೆ ಆತ ( ಈ ಬೊಡ್ಚಿ , ಯಾನೇ ಬುಡು ಸೈಪೆ, ನಿಕ್ಕ್‌ ದಾಯೆ ಮಂಡೆ ಬೆಚ್ಚ, ಪಾಪಿ ಯಾನ್‌ ಅತ ) ನೀನು ಸಾಯ್ಬೇಡ , ನಾನೇ ಸಾಯ್ತೇನೆ, ನಿನಗೆ ಯಾಕೆ ಟೆನ್ಷನ್‌ , ಪಾಪಿ ನಾನಲ್ವ ಅಂತ ಆತ ಹೇಳಿದ್ದಾನೆ. ಅದಕ್ಕೆ ಅವಳು( ಎಲಾಂಜಿ ತೂಲಾ, ನನ ಯಾನ್‌ ಏರ್‌ ಪನ್ನೆನ್ಲಾ ಕೇನುಜಿ , ಬೈ) ನಾಡಿದ್ದು ನೋಡು, ನಾನು ಇನ್ನು ಯಾರು ಹೇಳಿದ್ದನ್ನು ಕೇಳುವುದಿಲ್ಲ , ಬೈ ಅಂತ ಹೇಳಿದ್ದಾಳೆ. ಇಷ್ಟು ಇವರ ನಡುವೆ ಆದ ಮಾತುಕತೆಯಾಗಿದೆ.

Leave a Reply

Your email address will not be published. Required fields are marked *