Fri. Dec 27th, 2024

ಮೇಷ ರಾಶಿ: ಹುರುಳಿಲ್ಲದ ಮಾತಿಗೆ ಕಿವಿಕೊಡುವುದು ಬೇಡ. ನಿಮ್ಮ ವರ್ತನೆಯನ್ನು ಬೇರೆಯವರ ಮೂಲಕದಿಂದ ತಿದ್ದಿಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಗುಂಪಿನಿಂದ ತಪ್ಪಾಗದಂತೆ ಪರೀಕ್ಷಿಸಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಇಂದು ನಿಮ್ಮ ರಪ್ತು ಅಡೆತಡೆಗಳಿಲ್ಲದೇ ನಡೆಸುವಿರಿ. ದಾಖಲೆಗಳು ಸರಿಯಿದ್ದಾಗ ಅನ್ಯ ಯೋಜನೆ ಬೇಡ. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು.

ವೃಷಭ ರಾಶಿ: ತಿರಸ್ಕಾರದ ಸ್ಥಳದಲ್ಲಿಯೇ ಪುರಸ್ಕಾರ ಪಡೆಯುವ ಹಠವಿರುವುದು. ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಕುಟುಂಬದ ಜೊತೆ ಇಂದು ಸಮಯವನ್ನು ಕಳೆಯಲು ಸಾಧ್ಯವಾಗುವುದು. ನಿಮ್ಮ ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಇಂದು ನೀವು ಅಚಾತುರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂಟಿತನವು ನಿಮ್ಮನ್ನು ಆವರಿಸಬಹುದು. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ಬೆಲೆಯನ್ನು ಕೊಡುವುದಿಲ್ಲ. ಇಂದು ನಿಮಗಾದ ವಿಶ್ವಾಸದ್ರೋಹದಿಂದ ಎಲ್ಲರ ಮೇಲೆ ಅಸಮಾಧಾನ ತೋರುವಿರಿ.

ಮಿಥುನ ರಾಶಿ: ನಿಮ್ಮ ಹಿಂಜರಿಕೆಯಿಂದ ನಿಮಗೇ ನಷ್ಟ. ಕಾರ್ಯದ ಒತ್ತಡದಿಂದ ಆರೋಗ್ಯವು ಹದ ತಪ್ಪಬಹುದು. ಸರ್ಕಾರದ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಯಾರಾದರೂ ನಿಮಗೆ ಹೊಸ ದಿಕ್ಕನ್ನು ಪರಿಚಯಿಸಬಹುದು. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾದೀತು. ಪತ್ನಿಯು ನಿಮ್ಮನ್ನು ದೂಷಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಫಲವು ಲಭಿಸಿ, ಸಂತಸವಾಗುವುದು.

ಕರ್ಕಾಟಕ ರಾಶಿ: ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸಂಕೀರ್ಣವಾದ ಜೀವನವನ್ನು ಆಶಾವಾದದಿಂದ ಸರಳವಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಕಛೇರಿಯಲ್ಲಿ ಎಲ್ಲ ಕೆಲಸಕ್ಕೂ ನಿಮ್ಮನ್ನೇ ದೂಡಬಹುದು. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಕಛೇರಿಯಲ್ಲಿ ನಿಮ್ಮ ದಾಖಲೆಗಳು ಕಾಣಿಸದೇ ಹೋಗಬಹುದು. ನಿಮಗೆ ಬೇಡದ ವಸ್ತುವಾದರೂ ಇಂದು ಯಾರಿಗೂ ಕೊಡುವುದು ಬೇಡ.

ಸಿಂಹ ರಾಶಿ: ಕ್ಲಿಷ್ಟದ ಸಂದರ್ಭಗಳನ್ನು ಎದುರಿಸಿದಷ್ಟು ಗಟ್ಟಿಯಾಗಬಹುದು. ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು. ನಿಮಗೆ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ. ನಿಮ್ಮ ಮೇಲಿನ ಆರೋಪಗಳನ್ನು ಕಾರ್ಯದ ಮೂಲಕ ತಳ್ಳಿಹಾಕುವಿರಿ. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವು ಪೂರ್ಣವಾಗಿ ಸಿಗದು. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿ ಇರಲಿ.

ಕನ್ಯಾ ರಾಶಿ: ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವ ದಿನ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನೀವು ಉದ್ಯೋಗವನ್ನು ಬದಲಾಯಿಸಲು ಕಷ್ಟವಾದೀತು. ಮಕ್ಕಳಿಂದ ನಿಮಗೆ ತೊಂದರೆ ಆಗಬಹುದು. ಮನಸ್ಸಿನ ನಿಯಂತ್ರಣದಲ್ಲಿ ನಿಮಗೆ ಕಷ್ಟವಾದೀತು. ಕುಟುಂಬದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಿ. ಯಾರ ಸ್ನೇಹಕ್ಕೂ ಮನಸ್ಸು ಒಲ್ಲದು. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಆಸೆಯು ಇದ್ದರೂ, ನಿಮಗೆ ಅಂತಹ ಘಟನೆ ಸಿಗದೆಹೋಗುವುದು.

ತುಲಾ ರಾಶಿ: ಚಿಂತೆಯಲ್ಲಿ ದಿನವು ಕಳೆದುಹೋಗುವುದು. ಇಂದು ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು‌‌. ನಿಮ್ಮ ವಿರೋಧಿಗಳು ಹೆಚ್ಚಾಗಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಓಡಾಡಬೇಕಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ಇರಲಿದೆ. ನಿಮಗೆ ಆಗುವ ಸಹಾಯವನ್ನು ಮಾಡಿ.‌

ವೃಶ್ಚಿಕ ರಾಶಿ: ಕೆಲವು ಸ್ವಭಾವವನ್ನು ನೀವು ಬಿಡುವ ಯೋಚನೆ ಮಾಡುವಿರಿ. ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನ‌ಸಂಚಾರದಿಂದ ಆಯಾಸವಾಗುವುದು.‌ ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ದಿನವು ಆನಂದದಿಂದ ಇರುವುದು. ಮನಸ್ಸು ಅನ್ಯ ಆಲೋಚನೆಯಲ್ಲಿ ಮಗ್ನವಾಗಿರುವುದು.

ಧನು ರಾಶಿ: ನಿಮಗೆ ಬರಬೇಕಾದ ಹಣವನ್ನು ಪಡೆಯಲು ಸಾಧ್ಯವಾಗದು. ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ಶುಭಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಇರಲಿದೆ. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ. ಇತರರಿಗೆ ನೋವಾಗದಂತೆ ಮಾತುಗಳನ್ನಾಡಿ.

ಮಕರ ರಾಶಿ: ಅಂದಿನ ಕಾರ್ಯವನ್ನು ಮುಗಿಸಿದರೆ ಭಯವಿಲ್ಲ. ಹಳೆಯ ವಿಚಾರವನ್ನು ಇಂದು ವಿರೋಧಿಗಳು‌ ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುವುದು. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ‌. ನಿರಂತರ ಕ್ರಿಯಾಶೀಲತೆಯು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವುರು‌. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಆತಂಕವಿರಲಿದೆ. ಸಹೋದ್ಯೋಗಿಗಳು ನಿಮ್ಮ ವರ್ತನೆಯನ್ನು ಗಮನಿಸುವರು. ಹೊಸ ಭೂಮಿಯ ಖರೀದಿಗೆ ಆಪ್ತರನ್ನು ಜೊತೆಗೆ ಇಟ್ಟುಕೊಳ್ಳಿ.

ಕುಂಭ ರಾಶಿ: ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ನಿಮ್ಮ ಪ್ರೀತಿಪಾತ್ರರ ಜೊತೆ ಆಪ್ತವಾದ ಸಮಯವನ್ನು ಕಳೆಯುವಿರಿ.‌ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ಅಲ್ಪ ತಾಳ್ಮೆಯೂ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ನಿಮ್ಮ‌ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿ. ಅಪರಿಚಿತರ ಸಹವಾಸವು ಇಂದು ಬೇಡ. ನಿಮ್ಮ ಸಂಪತ್ತು ನಷ್ಟವಾಗಬಹುದು. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು.

ಮೀನ ರಾಶಿ: ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಪ್ತರನ್ನು ನೀವು ದೂರ ಮಾಡಿಕೊಳ್ಳುವುದು ಕಷ್ಟವಾಗಬಹುದು. ಕುಟುಂಬದವರನ್ನು ನೀವು ಕಳೆದುಕೊಳ್ಳಬೇಕಾದೀತು. ಪರೀಕ್ಷೆಯ ಸಿದ್ಧತೆಯಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ. ಇಂದು ನೀವು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವಿರಿ. ಮನೆಯ ಬದಲಾವಣೆಯು ಅನಿವಾರ್ಯವಾದೀತು.

Leave a Reply

Your email address will not be published. Required fields are marked *