Thu. Dec 26th, 2024

ಮೇಷ ರಾಶಿ: ಆಪ್ತರ ದುಃಖದಿಂದ ನಿಮಗೆ ಸಂಕಟವಾಗಬಹುದು. ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ.

ವೃಷಭ ರಾಶಿ: ಅಮೂಲ್ಯ ವಸ್ತುಗಳ ಮಾರಾಟದ ಸಂದರ್ಭ ಬರಬಹುದು. ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ.ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಕೇಳದೆಯೇ ಕೊಡುವುದು ನಿಮ್ಮ ಗುಣ.

ಮಿಥುನ ರಾಶಿ: ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಮನೆಯ ನವೀಕರಣದ ಬಗ್ಗೆ ಆಲೋಚಿಸುವಿರಿ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿ ಇರದು. ಸಣ್ಣ ವಿಚಾರಗಳಿಂದ ಸಂಗಾತಿಯ ನಡುವೆ ವೈಮನಸ್ಯ ಉಂಟಾಗುವುದು. ನಿಮ್ಮ ನೇರ ನುಡಿಯು ಎದುರಿನವನನ್ನು ಘಾಸಿ ಮಾಡಬಹುದು.

ಕರ್ಕಾಟಕ ರಾಶಿ: ಯಾವುದೇ ಭಾವವನ್ನು ದೀರ್ಘಕಾಲ ಮುಚ್ಚಿಡುವುದು ಕಷ್ಟ. ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ನಿಮ್ಮ ನಿಧಾನಗತಿಯನ್ನು ಬದಲಿಸಿಕೊಳ್ಳಿ. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ಸಮಾರಂಭದಲ್ಲಿ ಆಪ್ತರ ಭೇಟಿಯಾಗಲಿದೆ. ಹಳೆಯ ಗೆಳತಿಯು ನಿಮ್ಮನ್ನು ಮಾತನಾಡಿಸಲು ಬರಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿ‌ ಮಾಡೀತು. ಕಛೇರಿಯಲ್ಲಿ ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.

ಸಿಂಹ ರಾಶಿ: ಎಷ್ಟೇ ಬೇಸರವಾದರೂ ನಿಮ್ಮ ಕಾರ್ಯವನ್ನು ಬಿಡುವಂತಿಲ್ಲ. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳುವಿರಿ. ಅಪರಿಚಿತರ ಜೊತೆ ಸಿಕ್ಕಿ ಮಾನಸಿಕ ಹಿಂಸೆಯನ್ನು ಪಡುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು.

ಕನ್ಯಾ ರಾಶಿ: ಸಂಗಾತಿಯಿಂದ ಮಾನಸಿಕವಾಗಿ ಘಾಸಿಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ಮೋಹವೇ ನಿಮ್ಮ ಸಾಧನೆಯ ದಾರಿಯನ್ನು ತಪ್ಪಿಸುವುದು. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ.

ತುಲಾ ರಾಶಿ: ನಿಮ್ಮ ಭಾರ ಕಡಿಮೆಯಾಗಲು ಉಪಾಯವನ್ನು ಕಂಡುಕೊಳ್ಳುವಿರಿ. ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ಇಂದು ಆಗುವ ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟ. ಬುದ್ಧಿವಂತಿಕೆ ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ಕಲೆಗೆ ಸಂಬಂಧಿಸಿದಂತೆ ನೀವು ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ.

ವೃಶ್ಚಿಕ ರಾಶಿ: ಅನಿಶ್ಚಿತತೆಯಿಂದ ಭಯವಾಗುವ ಸಾಧ್ಯತೆ.‌ ಪ್ರಭುತ್ವವನ್ನು ಇನ್ನೊಬ್ಬರಿಂದ ಪಡೆಯುವಿರಿ.ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ತಾತ್ಕಾಲಿಕ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು.

ಧನು ರಾಶಿ: ಕೈಯಲ್ಲಿರುವ ಬೆಣ್ಣೆ ಬಿಟ್ಟು ತುಪ್ಪಕ್ಕೆ ಅರಸಿದರೆ ಅದು ಕಷ್ಟ. ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ನಿಮ್ಮ ಪ್ರೌಢಿಮೆಯನ್ನು ತೋರಿಸಿ. ನಿಮ್ಮ‌ ಅಭಿಪ್ರಾಯವೂ ಮುಖ್ಯವಾಗಬಹುದು.

ಮಕರ ರಾಶಿ: ಇಂದು ಮನೆಯಲ್ಲಿ ಅಸ್ವತಂತ್ರತೆಯ ಅನುಭವ ಬರಬಹುದು. ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋಧಕರಿಗೆ ಒಳ್ಳೆಯದೆಂದು ಅವಕಾಶವು ಸಿಗುವುದು.

ಕುಂಭ ರಾಶಿ: ಇಂದಿನ‌ ಲೋಭವು ನಿಮ್ಮ‌ ಸಂತೋಷವನ್ನು ಕಿತ್ತುಕೊಳ್ಳಬಹುದು. ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ‌ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಕೆಲವು ದುರಭ್ಯಾಸವನ್ನು ಬಿಡುವಿರಿ. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ.

ಮೀನ ರಾಶಿ: ನಿಮ್ಮ ಶೋಧನೆ ಸತ್ಯವನ್ನು ತೋರಿಸುವ ಕಡೆ ಇರಲಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಕೆಲಸದಲ್ಲಿ ಗೊಂದಲವು ಉಂಟಾಗಬಹುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತು ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ.

Leave a Reply

Your email address will not be published. Required fields are marked *