Thu. Dec 26th, 2024

Bantwala: ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪ ಮಹಮ್ಮದ್ ರಫೀಕ್ ಅರೆಸ್ಟ್!!

ಬಂಟ್ವಾಳ : ನಾಲ್ಕು ಮದುವೆಗಳನ್ನು ಮುರಿದು ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪನನ್ನು ಬಂಟ್ವಾಳದ ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿರುವ ಘಟನೆ ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ನಡೆದಿದೆ.

ಆರೋಪಿಯಾಗಿರುವ ಮಹಮ್ಮದ್ ರಫೀಕ್(42) ತನ್ನ ನಾಲ್ಕನೇಯ ಪತ್ನಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಮಗುವನ್ನು ಕೊಂದು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾನೆ.

ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆದು ಎಸೆಯಲು ಮುಂದಾಗಿದ್ದಾನೆ ಮತ್ತು ತ್ರಿವಳಿ ತಲಾಖ್ ಎಂದು ಹೇಳಿ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ದಬ್ಬಿದ್ದಾನೆಂದು ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆಯು ತಿಳಿಸಿದ್ದಾಳೆ. ಆಕೆಯ ಚಿನ್ನಾಭರಣಗಳನ್ನೂ ಕಿತ್ತುಕೊಂಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಮಹಮ್ಮದ್ ರಫೀಕ್ ನ ವಿರುದ್ಧ ಸೆಕ್ಷನ್ BNS/-85,86,352,351(1),115(2) ರಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *