ಬಂಟ್ವಾಳ: (ನ. 30)ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಬಳಿ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರು ರೈಲು ಢಿಕ್ಕಿಯಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮಾಣಿ ಗ್ರಾಮದ ಕಾಪಿಕಾಡ್ ನಿವಾಸಿ ವಸಂತ ಸೀನ ಪೂಜಾರಿ(42) ಮೃತಪಟ್ಟವರು.
ಶುಕ್ರವಾರ ಬೆಳಗ್ಗೆ ರೈಲ್ವೇ ಹಳಿಯಲ್ಲಿ ರೈಲಿನಡಿಗೆ ಬಿದ್ದು ಸಂಪೂರ್ಣವಾಗಿ ಛಿದ್ರಗೊಂಡ ದೇಹವೊಂದು ಪತ್ತೆಯಾಗಿದ್ದು, ಬಳಿಕ ಪರಿಶೀಲಿಸಿದಾಗ ವಸಂತ ಅವರ ಮೃತದೇಹ ಎಂದು ಗುರುತಿಸಲಾಗಿದೆ.
ಅವರು ನ. 28 ರ ರಾತ್ರಿಯಿಂದ ನಾಪತ್ತೆಯಾಗಿದ್ದು, ರಾತ್ರಿ ಕರೆ ಮಾಡಿ ನಾಳೆಯಿಂದ ನಾನು ಇಲ್ಲ ಎಂದು ಹೇಳಿದ್ದು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಂಶಯಿಸಲಾಗಿದೆ.