ಬೆಳ್ತಂಗಡಿ : (ನ. 30)ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 18 ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2024 ರ ಅಕಾಡೆಮಿ ಬಹುಮಾನಗಳಿಗೆ ಶಿಲ್ಪ ಕಲಾ ಕೃತಿಗಳ ಆಯ್ಕೆ ಮಾಡಲಾಗಿದೆ.
ಇದರಲ್ಲಿ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವಾಸಿಯಾದ ಶಶಿಧರ ಆಚಾರ್ಯ ಅವರ ಕನ್ನಿಕಾ ಪರಮೇಶ್ವರಿ (ಮರ ) ದ ಕಲಾಕೃತಿ ಆಯ್ಕೆಯಾಗಿವೆ.
ಡಿಸೆಂಬರ್ ನಲ್ಲಿ ನಡೆಯಲಿರುವ ಶಿಲ್ಪಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ವಿತರಿಸುವುದಾಗಿ ಅಕಾಡೆಮಿ ರಿಜಿಸ್ಟಾರ್ ಆರ್. ಚಂದ್ರಶೇಖರ ತಿಳಿಸಿದ್ದಾರೆ.