ಬೆಳ್ತಂಗಡಿ;(ನ.30) ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ನ. 29 ರಂದು ಮಸ್ಜಿದ್ ಸಭಾಂಗಣದಲ್ಲಿ ನಡೆದು 2025-26 ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಯಿತು.
ಗೌರವಾಧ್ಯಕ್ಷರಾಗಿ ಶೇಕಬ್ಬ ಹಾಜಿ ದರ್ಖಾಸ್, ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ, ಉಪಾಧ್ಯಕ್ಷರಾಗಿ ಇಬ್ರಾಹಿಂ ತಮುನಾಕ ಕಟ್ಟೆ, ಶಂಶುದ್ದೀನ್ ಕಟ್ಟೆ ಮತ್ತು ಬಶೀರ್ ವೇಣೂರು , ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಮಸೀದಿಬಳಿ,
ಕಾರ್ಯದರ್ಶಿಯಾಗಿ ಪಿ.ಕೆ. ಶರೀಫ್ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಮಂಜೊಟ್ಟಿ ಮತ್ತು ಅಶ್ರಫ್ ಕಟ್ಟೆ, ಕೋಶಾಧಿಕಾರಿಯಾಗಿ ಅಶ್ರಫ್ ಗುಂಡೇರಿ, ಲೆಕ್ಕ ಪರಿಶೋಧಕರಾಗಿ ಸಿದ್ದೀಕ್ ಮಸೀದಿಬಳಿ,
ವ್ಯವಸ್ಥಾಪಕರಾಗಿ ರಫೀಕ್ ಜಿ.ಎ, ಕಾನೂನು ಸಲಹೆಗಾರರಾಗಿ ಶಮೀಮ್ ಯು ಯೂಸುಫ್, ಸಲಹೆಗಾರರಾಗಿ ಹಾಜಿ ಅಬೂಬಕ್ಕರ್ ಮಂಜೊಟ್ಟಿ, ಖಮರುದ್ದೀನ್ ಮಸೀದಿಬಳಿ ಮತ್ತು ಹಾಜಿ ಅಬ್ದುಲ್ ಕರೀಂ ಕಾರಂದೂರು ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಕಮಿಟಿ ಸದಸ್ಯರಾಗಿ ಪಿ.ಕೆ ಆದಂ ಮಂಜೊಟ್ಟಿ, ದಾವೂದ್ ಸಾಹೇಬ್ ಮಂಜೊಟ್ಟಿ, ಅಬ್ಬು ಗಿಂಡಾಡಿ, ಸುಲೈಮಾನ್ ಕಟ್ಟೆ, ನಿಝಾಮ್ ಗಿಂಡಾಡಿ, ಶಮೀರ್ ಮಸೀದಿಬಳಿ, ಇಬ್ರಾಹಿಂ ಮಂಜೊಟ್ಟಿ, ಹಮೀದ್ ಬಾವಿಬಳಿ, ಹೈದರ್ ಮಂಜೊಟ್ಟಿ, ಅಝೀಝ್ ಜಿ.ಏ, ಹಕೀಂ ಕಟ್ಟೆ,
ಮುಸ್ತಫಾ ಮಂಜೊಟ್ಟಿ, ಮುಬಾರಕ್ ಮಂಜೊಟ್ಟಿ, ನಾಸಿರ್ ಮಸೀದಿಬಳಿ, ರಝಾಕ್ ಗಿಂಡಾಡಿ, ನಾಸಿರ್ ಅಲಿಮಾರ್, ಇಸ್ಮಾಯಿಲ್ ಮಂಜೊಟ್ಟಿ, ಹಸೈನಾರ್ ಮಂಜೊಟ್ಟಿ, ರಿಯಾಝ್ ಗಿಂಡಾಡಿ, ಇಸಾಕ್ ಕಾಪಿನಡ್ಕ, ರಫೀಕ್ ಪುತ್ತು ಕಟ್ಟೆ, ಪಿ.ಕೆ ರಿಯಾಝ್ ಕಟ್ಟೆ ಮತ್ತು ಸಮದ್ ಇವರುಆಯ್ಕೆಯಾಗಿದ್ದಾರೆ.