ಕುಂಬಳೆ:(ನ. 30) ಬೆಳಗಿನ ಜಾವ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಹಿಂದು ವಿದ್ಯಾರ್ಥಿನಿಗೆ ಅನ್ಯಕೋಮಿನ ಯುವಕನೊಬ್ಬ ಕಿರುಕುಳ ನೀಡಲು ಪ್ರಯತ್ನಿಸಿದನೆಂದೂ ಆತನಿಂದ ತಪ್ಪಿಸಿಕೊಂಡು ಯುವತಿ ತನ್ನ ಮನೆಯವರು ಹಾಗೂ ಹಿಂದು ಐಕ್ಯವೇದಿ ನೇತಾರರ ಜೊತೆಗೆ ಹೋಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.
ಕಿರುಕುಳ ನೀಡಲೆತ್ನಿಸಿದ ಯುವಕ ತಂಗಲ್ ವೀಡ್ ಪರಿಸರದ ಕುಂಬಳೆ ಸಿ. ಎಚ್. ಸಿ ರೋಡ್ ನಿವಾಸಿ ಅಬ್ದುಲ್ಲ ರ ಮಗನಾದ ನೌಫಲ್ ಎಂಬಾತನೆಂದು ತಿಳಿದುಬಂದಿದೆ. ಈತ ಪ್ರಸ್ತುತ ತಂಗಳಬೀಡು ಪರಿಸರವಾಸಿ ಎಂದು ಕೂಡ ತಿಳಿದು ಬಂದಿದೆ.
ಈ ವಿಚಾರದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರೂ ದಾಖಲಿಸದೆ ನೌಫಾಲ್ ನನ್ನು ಕೇಸಿ ನಿಂದ ಪಾರು ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು.
ಈ ವಿಷಯವನ್ನು ಅರಿತ ಹಿಂದು ಐಕ್ಯ ವೇದಿ ನೇತಾರರು ಮತ್ತು ಮನೆಯವರು ಈ ವಿಚಾರವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯವರ ಗಮನಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಕುಂಬಳೆ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ.