Wed. Apr 9th, 2025

Hyderabad: ಸೀರಿಯಲ್‌ ನಟಿ ಶೋಭಿತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಲೆಟರ್‌ ಪತ್ತೆ! – ಲೆಟರ್‌ ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!!! – ಶೋಭಿತಾ ಸಾವಿಗೆ ಪತಿ ಕಾರಣನಾ?!

ಹೈದರಾಬಾದ್‌ :(ಡಿ.2)ಕನ್ನಡದ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಮದುವೆ ಆಗಿ ಇನ್ನೂ ಎರಡು ವರ್ಷ ತುಂಬಿತ್ತಷ್ಟೇ.

ಇದನ್ನೂ ಓದಿ: ಬಂದಾರು : ಪೇರಲ್ದಪಳಿಕೆ ನಿವಾಸಿ ಶ್ರೀಮತಿ ಗೌರಿ ಸುಂದರ ಗೌಡ ರವರ ಮನೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ!!

ಆಗಲೇ ಜೀವನ ಕೊನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್​ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರಿಗೆ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ಒಂದು ವಿಚಾರ ಹೈಲೈಟ್ ಆಗಿದೆ.

ಶೋಭಿತಾಗೆ ಕನ್ನಡ ಚಿತ್ರರಂಗದ ಜೊತೆ ನಂಟು ಇತ್ತು. ‘ಎರಡೊಂದ್ಲಾ ಮೂರು’, ‘ಒಂದು ಕತೆ ಹೇಳ್ಲಾ’ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದರು. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದ್ದಾರೆ.

ಪೊಲೀಸರಿಗೆ ಶೋಭಿತಾ ಸೂಸೈಡ್​ ಲೇಟರ್ ಸಿಕ್ಕಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಬರೆಯಲಾಗಿದೆ. ‘ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ.

ಇದರ ಅರ್ಥಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ‘ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ’ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

ಶೋಭಿತಾ ಮದುವೆ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಿಂದ ದೂರ ಉಳಿದಿದ್ದರು. ಈ ವಿಚಾರವಾಗಿ ಪೊಲೀಸರು ಪತಿ ಸುಧೀರ್ ರೆಡ್ಡಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸುಧೀರ್​​ ರೆಡ್ಡಿ ಮೂರು ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದರು. ಆತ್ಮಹತ್ಯೆಗೂ ಮುನ್ನ ಶೋಭಿತಾ ತಮ್ಮ ಸಹೋದರಿಯೊಂದಿಗೆ ಮಾತುಕತೆ ಮಾಡಿದ್ದರು. ‘ನನಗೆ ತುಂಬಾ ಖುಷಿಯಾಗಿದೆ. 2 ವಾರದ ನಂತರ ಊರಿಗೆ ಬರುತ್ತೇನೆ’ ಎಂದು ಸಹೋದರಿ ಬಳಿ ಹೇಳಿಕೊಂಡಿದ್ದರು. ಆದರೆ, ಈಗ ಅವರ ಶವವಾಗಿ ಊರಿಗೆ ಬರುತ್ತಿರುವುದು ಬೇಸರದ ಸಂಗತಿ.

Leave a Reply

Your email address will not be published. Required fields are marked *