ಮಂಗಳೂರು:(ಡಿ.2) ಕೆಎಸ್‌ಆರ್‌ಟಿಸಿ ಬಸ್‌ನ ಗಾಜನ್ನು ಹೆಲ್ಮೆಟ್‌ನಿಂದ ಒಡೆದ ಸ್ಕೂಟರ್ ಸವಾರ ಪರಾರಿಯಾಗಿರುವ ಘಟನೆಯೊಂದು ಪಡೀಲ್ ಸಮೀಪದ ಅಳಪೆಯಲ್ಲಿ ಸಂಭವಿಸಿದೆ.
ಇದನ್ನೂ ಓದಿ: 💠ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್
ಕೆಎಸ್‌ಆರ್‌ಟಿಸಿ ಬಸ್ ಮಂಗಳೂರಿನ ಮೂಲಕ ಬೆಂಗಳೂರಿಗೆ ಹೋಗುತ್ತಿದ್ದಾಗ ಸ್ಕೂಟರ್ ಸವಾರ ಅಳಪೆ ಬಳಿ ಅಡ್ಡ ಬಂದಿದ್ದು, ಇದನ್ನು ಚಾಲಕ ಪ್ರಶ್ನೆ ಮಾಡಿದ್ದಾನೆ.
ಆಗ ಸ್ಕೂಟರ್ ಸವಾರ ಸ್ಕೂಟರನ್ನು ಬಸ್‌ಗೆ ಅಡ್ಡ ಇಟ್ಟು, ತನ್ನಲ್ಲಿದ್ದ ಹೆಲ್ಮೆಟ್‌ನಿಂದ ಬಸ್‌ನ ಕಿಟಕಿ ಹಾಗೂ ಮುಂಭಾಗದ ಗಾಜು ಒಡೆದು ಹಾಕಿದ್ದಾನೆ. ಇದರಿಂದ ಚಾಲಕನ ಕೈಗೆ ಗಾಯವಾಗಿದ್ದು, ಸವಾರ ಪರಾರಿಯಾಗಿದ್ದಾನೆ.
ಚಾಲಕ ಅರುಣ್ ದೂರು ನೀಡಿದ್ದು, ಕಂಕನಾಡಿ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ತನಿಖೆ ಮಾಡುತ್ತಿದ್ದಾರೆ.