Thu. Dec 26th, 2024

ಮೇಷ ರಾಶಿ: ನಿಮಗೆ ಉಚಿತ ಗೌರವ ಸಿಗಲಿದೆ. ಯಾವುದಾದರೂ ತೊಂದರೆಗೆ ನೀವೇ ಕಾರಣವೆಂದು ಪಶ್ಚಾತ್ತಾಪವಾಗಬಹುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ಸಮಾರಂಭಗಳಲ್ಲಿ ಮುಖ್ಯಸ್ಥರಾಗಬಹುದು. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಹತ್ತಿರದ ಆಪ್ತ ಬಂಧುಗಳನ್ನು ಕಳೆದುಕೊಳ್ಳುವಿರಿ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆ ಮಾಡುವಿರಿ.

ವೃಷಭ ರಾಶಿ: ಅಜೀರ್ಣವಾಗುವ ಯಾವುದನ್ನೂ ಸೇವಿಸಬಾರದು.ಅಧಿಕಾರಿಗಳ ಒತ್ತಡವೇ ನಿಮ್ಮ ಉದ್ವೇಗಕ್ಕೆ ಕಾರಣವಾಗಲಿದೆ. ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗಬಹುದು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಪ್ರಯಾಣದಿಂದ ನಿಮ್ಮ ದೇಹಸ್ಥಿತಿ ಬದಲಾಗಬಹುದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯು ಬರಬಹುದು.

ಮಿಥುನ ರಾಶಿ: ಅಜ್ಞಾತವಾಸದಿಂದ ಹೊರಬರುವ ಲಕ್ಷಣವಿದೆ. ಅನೇಕ ವಿಚಾರಗಳ ಕಡೆ ನಿಮ್ಮ ಗಮನವಿರುವುದು. ಹಾಗಾಗಿ ಇಂದಿನ ಕಾರ್ಯವು ಸಫಲವಾಗದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಅನ್ಯೋನ್ಯತೆ ಕಂಡುಬರುವುದು. ನೀವು ಮಾಡಬೇಕಂದುಕೊಂಡ ಕಾರ್ಯದಲ್ಲಿ ಜಯವಿರುವುದು. ಸ್ತ್ರೀಯರಿಂದ ಕಛೇರಿಯಲ್ಲಿ ಸಹಕಾರವು ಸಿಗಲಿದೆ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ.

ಕರ್ಕಾಟಕ ರಾಶಿ: ಬಹಿರಂಗವಾಗಿ ಬಹಳ ಸಭ್ಯರಾಗುವಿರಿ. ಅನ್ವೇಷಣೆಯ ಮನಃಸ್ಥಿತಿಯವರಿಗೆ ಯಾವುದಾದರೂ ಮಾರ್ಗವು ಸಿಗುವುದು. ರಾಜಕೀಯ ಪರಿವರ್ತನೆಯು ನಿಮ್ಮಲ್ಲಿ ಅಚ್ಚರಿ ತಂದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು.ನಿಮ್ಮ ರಹಸ್ಯ ವಿಚಾರವನ್ನು ಆಪ್ತರಿಗೆ ಹೇಳುವಿರಿ. ಸಿಟ್ಟು ನಿಮ್ಮ ಆರೋಗ್ಯವನ್ನು ಕೆಡಿಸುವುದು.

ಸಿಂಹ ರಾಶಿ: ನಿಮ್ಮನ್ನು ನೀವು ಖಾಲಿ ಮಾಡಿಕೊಳ್ಳುವುದು ಬೇಡ. ಸಂಗಾತಿಯ ಮನೋಭಾವವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ.‌ ಛಲವು ನಿಮಗೆ ಪರಿವರ್ತನೆಯನ್ನು ಕೊಡಿಸುವುದು. ನಿಮಗೆ ಯಾರಿಂದಲಾದರೂ ಸಹಾಯ ಕೇಳಲು ಸಂಕೋಚವಾದೀತು. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಸೃಷ್ಟಿಯಾಗಬಹುದು.

ಕನ್ಯಾ ರಾಶಿ: ಇಂದು ವ್ಯವಹಾರದ ಅನುಭವವನ್ನು ಕಲಿಯಿರಿ. ಸಂಬಂಧಗಳು ಸಂಬಂಧಗಳಾಗಿಯೇ ಇರಲಿ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ಸ್ನೇಹಿತರು ಪ್ರೀತಿಯಿಂದ ನಿಮಗೆ ಉಡುಗೊರೆ ಕೊಡುವರು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ಸಂಗಾತಿಯ ಜೊತೆ ಕಲಹವಾಡಿ ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ಯೋಜನೆಯನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದು. ನಿಮ್ಮನ್ನು ಸಮ್ಮಾನಿಸಬಹುದು. ಸಣ್ಣ ವಿಚಾರದಲ್ಲಿ ಇನ್ನೊಬ್ಬರ ಜೊತೆ ಕಲಹ ಬೇಡ. ಮರೆತು ಮುನ್ನಡೆಯುವುದು ಉತ್ತಮ. ಮಕ್ಕಳ ಜೊತೆ ಇಂದು ಕಾಲವನ್ನು ಕಳೆಯುವುದು ನಿಮಗೆ ಇಷ್ಟವಾದೀತು.

ತುಲಾ ರಾಶಿ: ಅತಿಯಾದ ಅವಲಂಬನೆ ಬೇಡ. ಸ್ವತಂತ್ರರಾಗುವ ಬಗ್ಗೆ ಯೋಚನೆ ಬರಲಿ. ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ. ಮನಸ್ಸನ್ನು ನಿಯಂತ್ರಿಸಲು ದುಶ್ಚಟಕ್ಕೆ ಬೀಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು.

ವೃಶ್ಚಿಕ ರಾಶಿ; ಬೆಂಬಲಿಗರು ನಿಮ್ಮನ್ನು ತಡೆಯಬಹುದು. ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ದೇವತಾಕಾರ್ಯದಿಂದ ನಿಮಗೆ ಇಂದಿನ ಎಲ್ಲ ಕಾರ್ಯಗಳೂ ಸುಗಮವಾಗುವುದು. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ನಿಮ್ಮ ಉಪಸ್ಥಿತಿಯನ್ನು ಗೌರವಿಸುವರು.

ಧನು ರಾಶಿ: ಅಜ್ಞಾನದ ಆವರಣದಿಂದ ನೀವು ಮುಕ್ತರಾಗಬೇಕು. ನೀವೇ ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಿಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ.‌

ಮಕರ ರಾಶಿ: ಸುಮ್ಮನೆ ಮನಸ್ತಾಪಕ್ಕಿಂತ ದೂರ ಉಳಿಯುವುದೇ ಶ್ರೇಯಸ್ಕರ. ಸಮಾನಮನಸ್ಕರು ಸೇರಿದಾಗ ಮಾತ್ರ ನಿಮ್ಮ ಕಾರ್ಯವು ಸಾಧುವಾಗುವುದು. ನಿಮ್ಮ ಮನಸ್ಸು ಕೆಲವು ಮಾತಿನಿಂದ ದುರ್ಬಲವಾಗಬಹುದು. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ನೀವು ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯ ಪಡೆಯಿರಿ.

ಕುಂಭ ರಾಶಿ: ನಿಮ್ಮ ಅಭಿಪ್ರಾಯವನ್ನು ಹೇಳಲು ಸ್ವತಂತ್ರರು. ಆದರೆ ಅದನ್ನು ಹೇರುವ ಕೆಲಸ ಮಾಡಬೇಡಿ. ಆಪ್ತರಿಂದ ನಿಮಗೆ ಪರೋಕ್ಷವಾಗಿ ನೋವು ಬರಬಹುದು. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ಜ್ವರವು ಕಾಣಿಸಿಕೊಂಡೀತು. ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಇಷ್ಟಪಡುವವರಿಗೆ ಸಮಯವನ್ನು ಕೊಡಲಾಗದು. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ.

ಮೀನ ರಾಶಿ: ಕಿವಿಮಾತಿನಿಂದ ಬುದ್ಧಿ ಅನ್ಯ ಮಾರ್ಗವನ್ನು ಹಿಡಿಯಬಹುದು. ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ.‌ ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ.

Leave a Reply

Your email address will not be published. Required fields are marked *