Chaitra Kundapura:(ಡಿ.3) ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಐದು ಕೋಟಿ ರೂ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕೋರ್ಟ್‌ಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: 💠ಉಜಿರೆ: ವರ್ತಕರ ಸಂಘದ ವಾರ್ಷಿಕ ಮಹಾಸಭೆ
ಬೆಂಗಳೂರಿನ 1 ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದು, ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಕೋರ್ಟ್‌ಗೆ ಹಾಜರಾಗಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇಂದು ಕೋರ್ಟ್‌ಗೆ ಹಾಜರಾಗಿದ್ದು, ವಿಚಾರಣೆಯನ್ನು ಎದುರಿಸಿದ್ದಾರೆ. ವಾರೆಂಟ್ ಬೆನ್ನಲ್ಲೇ ದೊಡ್ಮನೆಯಿಂದ ಚೈತ್ರಾ ಕುಂದಾಪುರ ನೇರವಾಗಿ ಕೋರ್ಟ್‌ಗೆ ಹಾಜರಾಗಿದ್ದರು.
ಬಿಗ್‌ಬಾಸ್ ಕಾರಿನಲ್ಲಿಯೇ ನೇರವಾಗಿ ಕೋರ್ಟ್‌ಗೆ ಬಂದ ಚೈತ್ರಾ ಅವರು ಯಾರ ಸಂಪರ್ಕಕ್ಕೂ ಸಿಗದೆ ಕಾಪಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ಮುಗಿಸಿ ಪುನಃ ಬಿಗ್‌ಬಾಸ್ ಮನೆಗೆ ಆಗಲಿದ್ದಾರೆ ಎಂಬ ಮಾಹಿತಿಯ ಕುರಿತು ವರದಿಯಾಗಿದೆ.