ದಿಡುಪೆ :(ಡಿ.3) ಮಗನ ಮನೆಗೆ ಬರುವ ವೇಳೆ ದಾರಿ ತಪ್ಪಿ ತಾಯಿಯೊಬ್ಬರು ಕಾಡಿನಲ್ಲಿ ಉಳಿದ ಘಟನೆ ದಿಡುಪೆ ಬಳಿ ನಡೆದಿದೆ.
ಇದನ್ನೂ ಓದಿ: ಬೆಳ್ತಂಗಡಿ: ಅಂಡಿಂಜೆ ಸರಕಾರಿ ಶಾಲೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.5ಲಕ್ಷ ರೂ. ನೆರವು
ತಾಯಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಭರತ್ ಅವರು, ಜಗದೀಶ್ ಗೌಡ ದಿಡುಪೆ ಅಶೋಕ್ ಗೌಡ ಇವರ ಸಹಾಯದಿಂದ ಮನೆಗೆ ತಲುಪಿಸಿದ್ದಾರೆ. ಕಳಸದ ಸಂಸೆಯ ಮನೆಯಲ್ಲಿದ್ದ ತಾಯಿ,
ಉಜಿರೆಯಲ್ಲಿ ವಾಸವಿರುವ ಮಗನನ್ನು ನೋಡಲು ಮನೆಯಿಂದ ಹೊರಟಿದ್ದರು. ದಟ್ಟ ಅರಣ್ಯವಾಗಿರುವ ಸಂಸೆ, ದಿಡುಪೆ ಮಾರ್ಗವಾಗಿ ಬಂದಿದ್ದರು, ದಾರಿ ಮಧ್ಯೆ ಅವರಿಗೆ ದಾರಿ ತಪ್ಪಿದೆ.
ಅಲ್ಲದೇ ಭಯಪಟ್ಟು ಕುಸಿದು ಕೂಡ ಬಿದ್ದಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ತಾಯಿಯನ್ನು ರಕ್ಷಿಸಿ ಉಜಿರೆಯಲ್ಲಿ ಇರುವ ಮಗನ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.