Thu. Dec 5th, 2024

ಉಜಿರೆ:(ಡಿ.3) ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ರಿ.) ವತಿಯಿಂದ 2023 ಮತ್ತು 24ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.03 ರಂದು ಉಜಿರೆಯ ಶಾರದ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಮುಂಬರುವ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.

ಇದನ್ನೂ ಓದಿ: ಮಂಗಳೂರು : ಕಟೀಲು ದೇವಾಲಯಕ್ಕೆ ಭೇಟಿ ನೀಡಿದ ರಿಯಲ್‌ ಸ್ಟಾರ್‌ ಉಪೇಂದ್ರ

ಕಾರ್ಯಕ್ರಮದಲ್ಲಿ ಮಾತನಾಡಿದ ಉಜಿರೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್ , ಸಂಘದ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು.


ವರ್ತಕರ ಸಂಘ ಪ್ರಾರಂಭಗೊಂಡು 4 ವರ್ಷಗಳಾಗಿವೆ. ಆದರೆ ಮೊದಲ ಬಾರಿ ಮಹಾ ಸಭೆಯನ್ನು ನಡೆಸುತ್ತಿದೇವೆ. ಹಿರಿಯ ವರ್ತಕನನ್ನು ಗುರುತಿಸುವ ಕೆಲಸ, ರಿಕ್ಷಾ ಚಾಲಕರು ಅಪಘಾತಕ್ಕೊಳಗಾದಾಗ ಅವರಿಗೆ ಸಹಕಾರ ನೀಡುವ ಕೆಲಸ, ಸಮಾಜ ಮುಖಿ ಕೆಲಸಗಳನ್ನು ವರ್ತಕರ ಸಂಘ ಮಾಡುತ್ತಿದೆ. ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ, ಸ್ವಾತಂತ್ರ್ಯ ದಿನದ ಆಚರಣೆಯನ್ನು ಮಾಡಲಾಗಿದೆ. ವಿಶೇಷ ಆಚರಣೆಗಳನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲು ಕಾರಣ ನಮ್ಮ ವರ್ತಕರ ಸಂಘದ ಒಗ್ಗಟ್ಟು, ಆ ಒಗ್ಗಟ್ಟು ಹೀಗೆ ಇರಲಿ ಎಂದು ತಮ್ಮ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.


ಬಳಿಕ ವರ್ತಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಹಲವು ಸಲಹೆ ಸೂಚನೆಗಳನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ವರ್ತಕರ ಸಂಘದಲ್ಲಿ ಒಗ್ಗಟ್ಟಿನ ಮಂತ್ರ ಎನ್ನುವ ಧ್ಯೇಯ ವಾಕ್ಯವಿದೆ. ಒಗ್ಗಟ್ಟಾಗಿ‌ ವ್ಯವಹಾರ ಮಾಡಬೇಕು, ಜಾತಿ, ಮತ ಧರ್ಮಗಳ ಬಿಟ್ಟು ವರ್ತಕರೆಲ್ಲಾ ಒಂದೇ ಎನ್ನುವ ಭಾವನೆ ಇರಬೇಕು.

ನಮಗೆ ವ್ಯಾಪಾರ ಬರಬೇಕಾದರೆ ನಾವೇ ಒಟ್ಟಾಗಿ ಶ್ರಮಿಸಬೇಕು. ಎನ್ನುವ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಹರೀಶ್ ಪ್ರಾರ್ಥನೆ ಮಾಡಿದರು, ವರ್ತಕರ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸ್ವಾಗತಿಸಿದರು, ಕಾರ್ಯದರ್ಶಿ ಲಕ್ಷ್ಮಣ್ ಗೌಡ ಧನ್ಯವಾದವಿತ್ತರು. ಸಭೆಯಲ್ಲಿ ಕೋಶಾಧಿಕಾರಿಗಳಾದ ಅಬೂಬಕ್ಕರ್ ಮತ್ತು ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *