Wed. Dec 4th, 2024

Belagavi: ಬಸ್ ನಲ್ಲಿ ಸೀಟಿಗಾಗಿ ಹೆಂಗಳೆಯರ ಕಿತ್ತಾಟ – ಯುವಕರನ್ನು ಕರೆಸಿ ದಂಪತಿಗೆ ಹಲ್ಲೆ ಮಾಡಿಸಿದ ಮುಸ್ಲಿಂ ಮಹಿಳೆಯರು!! – ಗರ್ಭಿಣಿಯೆಂದು ತಿಳಿದರೂ ಕ್ಯಾರೇ ಎನ್ನದೆ ಮನಬಂದಂತೆ ಥಳಿಸಿದ 10 ಮುಸ್ಲಿಂ ಯುವಕರು!!

ಬೆಳಗಾವಿ:(ಡಿ.4) ಸೀಟಿಗಾಗಿ ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 🛑ಕುಂದಾಪುರ: ಡಿ.5ರಂದು ಮದುವೆ ನಿಗದಿ

ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ, ಮಸರಗುಪ್ಪಿ ಕ್ರಾಸ್ ಬಳಿ ಸಂಕೇಶ್ವರದಿಂದ ಗೋಕಾಕ್​ಗೆ ಹೊರಟ್ಟಿದ್ದ ಬಸ್‌ನಲ್ಲಿ ಸುನೀತಾ ಪರಪ್ಪ ನಾಶಿಪುಡಿ ಮತ್ತು ಶಿವಪ್ಪ ಪರಪ್ಪ ನಾಶಿಪುಡಿ ಎಂಬ ಗಂಡ-ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಗಲಾಟೆ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿದೆ.

ಬಳಿಕ ಮಾತಿನ ಚಕಮಕಿಯ ಮೂಲಕ ಆರಂಭವಾದ ಜಗಳ ತಾರಕ್ಕಕ್ಕೆ ಹೋಗಿ ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಸಿನಿಮಾ ಶೈಲಿಯಲ್ಲಿ ಸುಮಾರು 10 ಮುಸ್ಲಿಂ ಯುವಕರು ಬಸ್​​ನ್ನು ಹಿಂಬಾಲಿಸಿಕೊಂಡು ಬಂದಿದ್ದು, ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿದ್ದಾರೆ.

ಬಸ್ ಅಡ್ಡಗಟ್ಟಿದ ಯುವಕರು ಸುನೀತಾ ಪರಪ್ಪ ನಾಶಿಪುಡಿ ಮತ್ತು ಶಿವಪ್ಪ ಪರಪ್ಪ ನಾಶಿಪುಡಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಸುನೀತಾ ಅವರು ಗರ್ಭಿಣಿ ಎಂದು ತಿಳಿದರು ಕೂಡ ಮನಬಂದಂತೆ ಥಳಿಸಿದ್ದಾರೆ.

ಬಸ್ನಲ್ಲಿದ್ದ ಸಹ ಪ್ರಯಾಣಿಕರು ದಯವಿಟ್ಟು ಬಿಡಿ ಎಂದು ಬೇಡಿದರೂ ಕೂಡ ಯಾವುದನ್ನು ಲೆಕ್ಕಿಸದೆ ಬಂದಂತೆ ಹಲ್ಲೆ ಮಾಡಿದ್ದಾರೆ. ಸದ್ಯ ಕೃತ್ಯ ಸಂಬಂಧ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *