Fri. Apr 11th, 2025

Delhi: ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ – ಅನುಮಾನ ಬಂದು ಹಿಂದೆ ಹೋದಾಗ ಆ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದ ವಧು!?

ದೆಹಲಿ :(ಡಿ.4)ದೆಹಲಿಯ ಸಾಹಿಬಾಬಾದ್​ನಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಶಾಸ್ತ್ರಗಳೆಲ್ಲಾ ಸುಸೂತ್ರವಾಗಿ ನಡೆಯುತ್ತಿದ್ದವು. ಆದರೆ ವರ ಪದೇ ಪದೇ ಮಂಟಪದಿಂದ ಎದ್ದು ಹೋಗುತ್ತಿದ್ದ. ವಧು ಏನೇ ಕೇಳಿದರೂ ಯಾವ ಉತ್ತರವನ್ನೂ ನೀಡುತ್ತಿರಲಿಲ್ಲ. ಆಗ ವಧು ತನ್ನ ಕಡೆಯವರನ್ನು ಆತನ ಹಿಂದೆ ಹೋಗುವಂತೆ ಹೇಳಿದಾಗ ಅಲ್ಲಿ ನಡೆಯುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Sobhitha Dhulipal: “ಅಕ್ಕಾ ನೀನು ಅತ್ಯಂತ ಸುಂದರ ವಧು” ಎಂದ ಸಮಂತಾ!!

ಮೊದಲು ಮೊದಲು ವಾಶ್​ರೂಮ್​ಗೆ ಹೋಗುತ್ತಿರಬೇಕು ಎಂದುಕೊಂಡಿದ್ದರು. ಆದರೆ ಆತ ಸ್ನೇಹಿತರೊಂದಿಗೆ ಕುಳಿತುಕೊಂಡು ಮಾದಕದ್ರವ್ಯ ಸೇವಿಸುತ್ತಿರುವುದು ಕಂಡು ಎಲ್ಲರೂ ಗಾಬರಿಗೊಂಡರು. ಮದುವೆಯ ಈ ದಿನಕ್ಕಾಗಿ ತಿಂಗಳಾನುಗಟ್ಟಲೆ ಗಂಡು-ಹೆಣ್ಣಿಬ್ಬರೂ ತುಂಬಾ ತಯಾರಿ ನಡೆಸಿದ್ದರು.ಆದರೆ ಮದುವೆಯ ದಿನ ನಡೆದ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು.

ಆತ ಪದೇ ಪದೇ ಹೊರಗೆ ಹೋಗಿಬಂದಾಗಲೂ ವಿಚಿತ್ರವಾಗಿ ವರ್ತಿಸುತ್ತಿದ್ದ ಸರಿಯಾಗಿ ನಡೆಯಲು ಕೂಡ ಆತನಿಂದ ಸಾಧ್ಯವಾಗುತ್ತಿರಲಿಲ್ಲ. ಸತ್ಯ ಬೆಳಕಿಗೆ ಬಂದಾಗ ಮದುವೆಮನೆ ಗೊಂದಲದ ಗೂಡಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಲ್ಲಿಗೆ ಕರೆಸಿದರು. ವರನ ಕುಟುಂಬದವರು 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮದುವೆಯ ದಿನ ವರ ತನ್ನ ಸ್ನೇಹಿತರೊಂದಿಗೆ ಮಾದಕದ್ರವ್ಯ ಸೇವಿಸಿದ್ದ, ಅದನ್ನು ನೋಡಿ ವಧು ಮದುವೆಯಾಗಲು ನಿರಾಕರಿಸಿ ಮದುವೆಯ ಮೆರವಣಿಗೆಯನ್ನು ಹಿಂದಿರುಗಿಸಿದ್ದಾಳೆ. ವರನ ಕಡೆಯವರು ಗಲಾಟೆ ಸೃಷ್ಟಿಸಿದಾಗ ಪೊಲೀಸರಿಗೆ ಕರೆ ಮಾಡಬೇಕಾಯಿತು.

ವರನ ಕಡೆಯವರ ವಿರುದ್ಧ ವಧುವಿನ ತಾಯಿ ಪ್ರಕರಣ ದಾಖಲಿಸಿದ್ದಾರೆ. ಶಹೀದ್‌ನಗರದ ನಿವಾಸಿಯಾಗಿರುವ ಮಹಿಳೆ, ದೆಹಲಿಯ ಗಾಂಧಿನಗರದ ನಿವಾಸಿ ಅವಿನಾಶ್‌ನೊಂದಿಗೆ ತನ್ನ ಮಗಳ ಮದುವೆಯನ್ನು ನಿಶ್ಚಯಿಸಲಾಗಿತ್ತು ಎಂದು ಹೇಳಿದ್ದಾರೆ. ನವೆಂಬರ್ 27 ರಂದು ತಿಲಾ ಮೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಮನೆಯಲ್ಲಿ ಮದುವೆಯ ವಿಧಿವಿಧಾನಗಳನ್ನು ಪ್ರಾರಂಭಿಸಲಾಯಿತು. ಜಯಮಾಲಾ ವೇಳೆ ವರ ತನ್ನ ಸ್ನೇಹಿತರೊಂದಿಗೆ ಕುಡಿದು ಬಂದಿದ್ದ ಎನ್ನಲಾಗಿದೆ.

ಇದಾದ ಮೇಲೆ ವಧು ವರನಿಗೆ ಮಾದಕ ವ್ಯಸನಿ ಎಂದು ಹೇಳಿ ಮದುವೆಯಾಗಲು ನಿರಾಕರಿಸಿದ್ದಾಳೆ. ಈ ವೇಳೆ ವರನ ಕಡೆಯವರು ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು