ಕುಂದಾಪುರ:(ಡಿ.4) ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೆರ್ನಾಜೆ: ಸ್ವರ ಸಿಂಚನ ಸಂಗೀತೋತ್ಸವ -2024 ದಲ್ಲಿ ಕುಮಾರ್ ಪೆರ್ನಾಜೆ ದಂಪತಿಗಳಿಗೆ ಗೌರವ ಪುರಸ್ಕಾರ
ಕೊಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬವರು ಕಾರ್ತಿಕ್(28) ಎಂಬವರನ್ನು ಮದುವೆ ಮಾತುಕತೆ ಮಾಡಿಕೊಂಡು ಡಿ.5ರಂದು ಮದುವೆ ಆಗುವುದಾಗಿ ನಿಶ್ಚಯಿಸಿದ್ದರು.
ಅದರಂತೆ ಜು.16ರಂದು ಮದುವೆ ನೊಂದಣಿ ಮಾಡಿಕೊಂಡಿದ್ದರು. ನ.27ರಂದು ಅಪರಾಹ್ನ ವೇಳೆ ಕಾರ್ತಿಕ್, ಜಯಲಕ್ಷ್ಮೀಗೆ ಕರೆ ಮಾಡಿ, ತಾನು ಕೋಟೇಶ್ವರದಲ್ಲಿದ್ದು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೋಗಿದ್ದರು.
ನಂತರ ಅವರು ವಾಪಾಸ್ಸು ಬಾರದೇ ಮೊಬೈಲ್ ಸ್ವಿಚ್‌ಆಫ್ ಮಾಡಿ ಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ.