ಮಂಗಳೂರು:(ಡಿ.4) ರಾಮೇಶ್ವರಂ ಕೆಫೆ ಮಾದರಿಯಲ್ಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದ ಕುರಿತು ವರದಿಯಾಗಿದೆ. ನ.30ರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್ ಎನ್ನುವ ಹೆಸರಿನಿಂದ ಈ-ಮೇಲ್ ಸಂದೇಶ ಬೆದರಿಕೆ ಬಂದಿದೆ. ಈ ಕುರಿತು ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ಬಜಪೆ ಠಾಣೆಗೆ ದೂರನ್ನು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕಾರ್ಯಕರ್ತರ ಪುಂಡಾಟ
ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್ ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್ ಅವರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ.
ಪಾಕ್‌ನ ಐಎಸ್‌ಐನವರು ತಮಿಳುನಾಡು ಡಿಜಿಪಿಯ ಪುತ್ರಿ ದೌಡಿ ಜೀವಾಲ್ ಇವರನ್ನು ಬಳಸಿಕೊಂಡು ರಾಮೇಶ್ವರ ಕೆಫೆ ಬ್ಲಾಸ್ಟನ್ನು ಮಾಡಿದ್ದಾರೆ. ಜಮೇಶಾ ಮುಬೀನ್ ಇದಕ್ಕೆ ಸಹಕಾರ ನೀಡಿದ್ದಾಗಿ ಇಮೇಲ್ ಸಂದೇಶದಲ್ಲಿ ಬರೆಯಲಾಗಿದೆ. ಇದರಲ್ಲಿ ವಿ.ಬಾಲಕೃಷ್ಣನ್ ಐಪಿಎಸ್, ಎಡ್ವಕೇಟ್ ಶ್ವೇತಾ, ವರುಣ್ ಐಪಿಎಸ್ ಹೆಸರನ್ನು ಬರೆಯಲಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಕೂಡಾ ಎರಡ್ಮೂರು ಬಾರಿ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.