Sat. Dec 28th, 2024

ಮೇಷ ರಾಶಿ: ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ನಿಮ್ಮ ಆದಾಯವನ್ನು ಇತರರು ಲೆಕ್ಕ ಹಾಕಬಹುದು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ.

ವೃಷಭ ರಾಶಿ: ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಾಡುವುದು ಸೂಕ್ತ. ಇರುವ ಹಣವನ್ನು ಬೇಕಾದ ಸಮಯಕ್ಕೆ ಪಡೆಯಲು ಕಷ್ಟವಾಗಬಹುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಸಮರದ ರೀತಿಯಲ್ಲಿ ಇಂದಿನ ದಿನ ಕಳೆದಂತಾಗುವುದು. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು.

ಮಿಥುನ ರಾಶಿ: ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಕಲ್ಪನೆಗೆ ಒಂದು ಚೌಕಟ್ಟು ಇರಲಿ.

ಕರ್ಕಾಟಕ ರಾಶಿ: ನಿಮ್ಮ ಉದ್ಯಮವು ಇಚ್ಛೆಗೆ ಅನುಸಾರವಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಸಾಲವನ್ನು ಮಾಡಬೇಕಾಗುವುದು. ಕಾರಣಾಂತರದಿಂದ ನಿಮ್ಮ ಪ್ರಯಾಣವು ಸ್ಥಗಿತವಾಗಬಹುದು. ಯಂತ್ರಗಳ‌ ಮಾರಾಟದಿಂದ ನಿಮಗೆ ಆದಾಯವು ಹೆಚ್ಚಾಗುವುದು. ಮಕ್ಕಳನ್ನು ಖುಷಿಯಿಂದ ಇಡಲು ನಾನಾ ಪ್ರಯತ್ನವನ್ನು ಮಾಡುವಿರಿ. ಹಿರಿಯರ ಮಾತನ್ನು ಪಾಲಿಸುವಿರಿ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯ ಸಿಗುವುದು.

ಸಿಂಹ ರಾಶಿ: ಇಂದು ನಿಮ್ಮ ವ್ಯಕ್ತಿತ್ವದಿಂದ ಯಾರಾದರೂ ಆಕರ್ಷಿತರಾಗಹುದು. ನಿಮ್ಮ ಪ್ರೇಮದ ವಿಚಾರವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಸಮಯವು ವ್ಯರ್ಥವಾದಂತೆ ತೋರುವುದು. ಅನುಕಂಪವನ್ನು ಪಡೆಯುವ ನಾಟಕ ನಡೆಯಬಹುದು. ಆರೋಪವನ್ನು ತಡಡದುಕೊಳ್ಳುವ ಶಕ್ತಿ ಇರದು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಔಷದೀಯ ವ್ಯಾಪಾರದಲ್ಲಿ ಗಣನೀಯ ಪ್ರಗತಿಯು ಕಾಣಿಸುವುದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು.

ತುಲಾ ರಾಶಿ: ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ‌ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ಪ್ರೀತಿಯನ್ನು ಗೌಪ್ಯವಾಗಿ ಇಡುವಿರಿ.

ವೃಶ್ಚಿಕ ರಾಶಿ: ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ನಿಮ್ಮನ್ನು ಅನಾದರ ಮಾಡಿದಂತೆ ಕಂಡುಬಂದೀತು. ಸುಮ್ಮನೇ ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಸಾಕಷ್ಟು ಪ್ರಯತ್ನದ ಫಲವಾಗಿ ಉದ್ಯಮದ ದಾರಿಯು ಸುಗಮವಾಗುವುದು. ಪ್ರೇಮವಿವಾಹವು ತೀರ್ಮಾನವಾಗುವುದು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ.

ಧನು ರಾಶಿ: ನಿಮಗೆ ಹೊಂದಾಣಿಕೆ ಸ್ವಭಾವವು ಹಿಡಿಸುವುದಿಲ್ಲ. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ಮೋಹದಲ್ಲಿ ನೀವು ಬೀಳುವಿರಿ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಮನಸ್ಸಿನ ಚಾಂಚಲ್ಯದಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ.

ಮಕರ ರಾಶಿ: ಸಾಲವನ್ನು ತೀರಿಸುವ ಬಗ್ಗೆ ಸಣ್ಣ ಪ್ರಯತ್ನವನ್ನಾದರೂ ಮಾಡಿ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ.‌ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು.

ಕುಂಭ ರಾಶಿ: ನಿಮ್ಮ ನಕಾರಾತ್ಮಕ ಆಲೋಚನೆಗಳು ಇತರರಿಗೂ ತಿಳಿದೀತು. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಗಳಿಗೆ ತಂದೆಯಿಂದ ಬೇಕಾದ ಸಹಾಯವು ಸಿಗಬಹುದು. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು.

ಮೀನ ರಾಶಿ: ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ.

Leave a Reply

Your email address will not be published. Required fields are marked *