ಮಂಗಳೂರು :(ಡಿ.5) ಪೇಜಾವರ ಮಠಾಧೀಶರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯವಾಗಿದ್ದು ಪೂಜ್ಯ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಯವರ ಸಂವಿಧಾನ ಬದ್ಧತೆ ಪ್ರಶ್ನಾತೀತ ಎಂದು ವಿಶ್ವ ಹಿಂದೂ ಪರಿಷದ್ (VHP)ಹೇಳಿದೆ.
ಇದನ್ನೂ ಓದಿ: ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯವೆಸಗಿ ಜಾತಿನಿಂದನೆ
ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿಕೆ ಬಿಡುಗಡೆ ಮಾಡಿದ್ದು ಪೇಜಾವರ ಸ್ವಾಮೀಜಿ ಅವರು ಸಂವಿಧಾನಕ್ಕೆ ಬದ್ಧರಾಗಿದ್ದು ಹಿಂದು ಸಮಾಜದ ಸರ್ವರಿಗೂ ಸಮಾನ ಗೌರವ ಕೊಡುತ್ತ ಬಂದಿದ್ದು, ವಿಶೇಷವಾಗಿ ದಲಿತರನ್ನು ಕೂಡ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದಾಗ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ಜೊತೆಗೆ ಇದ್ದೆವು .ಆ ಸಂದರ್ಭ ಸಂವಿಧಾನವನ್ನು ಬದಲಾಯಿಸುವ ಯಾವ ಹೇಳಿಕೆ ಹೇಳಿರುವುದಿಲ್ಲ.
ಆದರೂ ಕೆಲವೊಂದು ಸಂಘಟನೆಗಳು ಸ್ವಾಮೀಜಿಯವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೆ ಶ್ರೀ ಗಳ ಬಗ್ಗೆ ಸುಳ್ಳು ಸುದ್ದಿ ಹೇಳಿಕೆ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ.
ಪೇಜಾವರ ಸ್ವಾಮೀಜಿಯವರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಆಯಾ ಸಂಘಟನೆಯವರು ಹಿಂದೆ ತೆಗೆದುಕೊಳ್ಳಬೇಕು ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತು ಸರಕಾರ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.