ಪುತ್ತೂರು:(ಡಿ.5) ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಾಗನ ಕಟ್ಟೆಯ ಬೀಗ, ಗೇಟ್‌ಗಳನ್ನು ಮುರಿದು ಹಾನಿ ಮಾಡಿರುವ ಘಟನೆಯೊಂದು ನಡೆದಿದೆ.
ಇದನ್ನೂ ಓದಿ: ⭕ಕಡಬ: ಬಿಳಿನೆಲೆ ಸಂದೀಪ್ ಕೊಲೆ ಪ್ರಕರಣ
ಹಾನಿ ಮಾಡಿದ ವ್ಯಕ್ತಿಯನ್ನು ಜಿಡೆಕಲ್ಲು ನಿವಾಸಿ ಸಲಾಂ ಎಂದು ಗುರುತಿಸಲಾಗಿದ್ದು, ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗ ಒಪ್ಪಿಸಿದ್ದಾರೆ.
ಸ್ಥಳೀಯ ನಗರಸಭಾ ಸದಸ್ಯ ಹಾಗೂ ನಾಗನಕಟ್ಟೆ ಸಮಿತಿಯ ಪದಾಧಿಕಾರಿಗಳು ಭಕ್ತರು ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿರುವ ಕುರಿತು ವರದಿಯಾಗಿದೆ.