Sat. Apr 19th, 2025

Ujire : ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದಿಂದ ಡಿ. 14ರಂದು ಯಕ್ಷ ಸಂಭ್ರಮ 2024 – ಕಾರ್ಯಕ್ರಮದ ಕರ ಪತ್ರ ಬಿಡುಗಡೆ

ಉಜಿರೆ :(ಡಿ.5) ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಬೆಳ್ತಂಗಡಿ ಘಟಕ ವತಿಯಿಂದ ಯಕ್ಷ ಸಂಭ್ರಮ 2024 ಡಿಸೆಂಬರ್ 14ರಂದು ಗುರುವಾಯನಕೆರೆಯ ಶಕ್ತಿ ನಗರದಲ್ಲಿರುವ ನವಶಕ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ಮಂಗಳೂರು :ಪೇಜಾವರ ಮಠಾಧೀಶರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ – ಶರಣ್ ಪಂಪ್‌ವೆಲ್

ಇದರ ಭಾಗವಾಗಿ ಡಿ. 4ರ ಸಂಜೆ ಕರ ಪತ್ರ ಬಿಡುಗಡೆ ಕಾರ್ಯಕ್ರಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಾನದಲ್ಲಿ ನಡೆಯಿತು. ಕರಪತ್ರವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಮೋಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ರವರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಅನ್ನುವ ತಂಡ ಹೊಸ ದಾರಿಯನ್ನು ಹಾಕಿಕೊಟ್ಟ ಸಂಸ್ಥೆ. ಅಲ್ಲದೇ ಪಟ್ಲ ಸತೀಶ್ ಶೆಟ್ಟಿರವರು ಇಡೀ ದೇಶದಲ್ಲಿ ಯಕ್ಷಗಾನವನ್ನು ಪಸರಿಸುವ ಮೂಲಕ ಪ್ರಸಿದ್ದಿಯನ್ನು ಹೊಂದಿದ್ದಾರೆ. ಅಲ್ಲದೇ ಈ ಯಕ್ಷ ಸಂಭ್ರಮ ಕಾರ್ಯಕ್ರಮದ ಮುಂದಾಳತ್ವವನ್ನು ಶಶಿಧರ್ ಶೆಟ್ಟಿ ಬರೋಡಾ ವಹಿಸಿಕೊಂಡಿರುವುದು ನಮಗೆ ಗೊತ್ತೇ ಇದೆ.

ಹೀಗಾಗಿ ಈ ಕಾರ್ಯಕ್ರಮ ಅದ್ದೂರಿ, ವಿಜೃಂಭಣೆಯಿಂದ ನಡೆಯುತ್ತದೆ. ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಳೆದ ವರ್ಷ ಕೂಡ ದೇವಸ್ಥಾನದ ರಥಬೀದಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಬಾರಿಯ ಕಾರ್ಯಕ್ರಮದಲ್ಲಿ ಹಲವು ಸೇವಾ ಕಾರ್ಯಗಳು ನಡೆಯಲಿದೆ. ಹೀಗಾಗಿ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯದರ್ಶಿ ಶಿಶಿಕಂಠ ಭಟ್, ಪದಾಧಿಕಾರಿಗಳಾದ ಭುಜಬಲಿ ಧರ್ಮಸ್ಥಳ, ಪ್ರಕಾಶ್ ಶೆಟ್ಟಿ ನೊಚ್ಚ, ರಘುರಾಮ ಶೆಟ್ಟಿ, ವಸಂತ ಸುವರ್ಣ, ಕೃಷ್ಣ ಆಚಾರ್ಯ, ಜಯ ಪ್ರಕಾಶ ಶೆಟ್ಟಿ, ರವಿ ಚಕ್ಕಿತ್ತಾಯ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *