ಉಜಿರೆ :(ಡಿ.5) ನೀವು ಕಲಿತ ವಿದ್ಯೆಯನ್ನು ನಿಮ್ಮ ಗ್ರಾಹಕರಿಗೆ ತಲುಪಿಸಲು ನಿಮ್ಮ ಸೇವೆಯ ಜೊತೆಗೆ ನಿಮ್ಮ ಮುಖದಲ್ಲಿ ನಗು ಇರಬೇಕು. ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗಡೆಯವರ ಸಮಾಜಮುಖಿ ಅನೇಕ ಕಾರ್ಯಕ್ರಮ ಇದೆ ಇದು ಎಲ್ಲವೂ ಮಾದರಿ ಸಂಸ್ಥೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಚಿನ್ನಾಭರಣ ಪಡೆದು ವಾಪಸ್ ಕೊಡದೆ ಸತಾಯಿಸಿದ ಸ್ನೇಹಿತ
ಇದೇ ರೀತಿಯಲ್ಲಿ ರುಡ್ ಸೆಟ್ ಸಂಸ್ಥೆ ಅನೇಕ ಯುವಕ-ಯುವತಿಯವರಿಗೆ ಮತ್ತು ಅವರ ಕುಟುಂಬಗಳಿಗೆ ಸ್ವಂತ ಕಾಲಿನಲ್ಲಿ ನಿಂತು ಬದುಕು ನಡೆಸಲು ಸಾಧ್ಯವಾಗಿದೆ. ನಿಮ್ಮಲ್ಲಿ ಬಂದ ಗ್ರಾಹಕರನ್ನು ಯಾವ ರೀತಿಯಲ್ಲಿ ಮೊದಲು ಅಧರಿಸಬೇಕು ಅದರ ಮೂಲಕ ನಿಮ್ಮ ವ್ಯವಹಾರದ ಅಭಿವೃದ್ಧಿ ಇರುತ್ತದೆ.
ವ್ಯವಹಾರ ಅಭಿವೃದ್ಧಿ ಯಾಗ ಬೇಕಾದರೆ ಗ್ರಾಹಕರ ಜೊತೆ ಉತ್ತಮ ಬಾಂದವ್ಯ ಇರಿಸಿಕೊಳ್ಳಬೇಕು. ನಿಮ್ಮ ವ್ಯವಹಾರದಲ್ಲಿ ಶಿಸ್ತು, ನಡೆ, ನುಡಿ ಇರಲಿ . ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಇಲ್ಲಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಅಭಿಪ್ರಾಯ ಪಟ್ಟರು.
ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ “ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ)ʼʼ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ತಮ್ಮ ಅನುಭವ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.
ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ದೀಕ್ಷಿತ್ ಮತ್ತು ಜೀವನ್ ಪ್ರಾರ್ಥನೆ ಮಾಡಿದರು. ಶಿಬಿರಾರ್ಥೀಗಳಾದ ಕುಮಾರಿ ಶ್ರಾಮ್ಯ ರೈ ಮತ್ತು ಪ್ರಮೋದ ತನ್ನ ತರಬೇತಿಯ ಅನುಭವ ಹಂಚಿಕೊಂಡರು.