ಬೆಳ್ತಂಗಡಿ:(ಡಿ.6) ದಸ್ಕತ್ ಸಿನಿಮಾ ಇದೇ ಬರುವ ದಿನಾಂಕ ಡಿಸೆಂಬರ್ 13ರಂದು ತೆರೆಕಾಣಲಿದೆ. ದಸ್ಕತ್ ತಂಡದಿಂದ ಬೆಳ್ತಂಗಡಿಯ ಸುವರ್ಣ ಆರ್ಕೆಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಇದನ್ನೂ ಓದಿ: Karkala: ಕಾರ್ಕಳದಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ
ತುಳು ಸಿನಿಮಾ ರಂಗದಲ್ಲಿ ಸಂಚಲನವನ್ನು ಮೂಡಿಸಲು ಸಜ್ಜಾಗಿರುವ ದಸ್ಕತ್ ಚಲನಚಿತ್ರದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಮಾತನಾಡಿ, ತುಳು ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ತೆರೆಕಂಡಿದೆ.
ಈಗ ಅಂತಹ ಚಿತ್ರಗಳ ಸಾಲಿನಲ್ಲಿ ನಮ್ಮ ದಸ್ಕತ್ ಚಿತ್ರವೂ ಸೇರಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ ದಸ್ಕತ್ ನಿಮ್ಮ ಮುಂದೆ ಬರುತ್ತಿದೆ ಎನ್ನುವ ಮಾತುಗಳನ್ನು ಹೇಳಿದರು. ದಸ್ಕತ್ ಸಿನಿಮಾದಲ್ಲಿ ಹೆಚ್ಚಾಗಿ ಬೆಳ್ತಂಗಡಿ ತಾಲೂಕಿನ ಯುವಕರೇ ಹೆಚ್ಚಾಗಿ ಇದ್ದಾರೆ ಜೊತೆಗೆ ತುಳು ಮಣ್ಣ ಸೊಗಡು ಅರಿತಿರುವ ಕಲಾವಿದರ ತಂಡವೂ ನಮ್ಮೊಂದಿಗೆ ಸೇರಿಕೊಂಡಿದೆ. ಹಾಗಾಗಿ ಉತ್ತಮ ಸಿನಿಮಾ ಸಮಾಜಕ್ಕೆ ನೀಡುತ್ತಿದ್ದೇವೆ ಎಂಬ ಖುಷಿ ನಮಗಿದೆ ಎನ್ನುವ ಮಾತುಗಳನ್ನು ಹೇಳಿದರು.
ದಸ್ಕತ್ ಸಿನಿಮಾ ಇದೇ ಬರುವ ಡಿಸೆಂಬರ್ 13ನೇ ತಾರೀಕಿನಂದು ದಕ್ಷಿಣ ಕನ್ನಡದಾದ್ಯಂತ ತೆರೆಕಾಣಲಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು.
ಪತ್ರಿಕಾಗೋಷ್ಠಿಯಲ್ಲಿ ದಸ್ಕತ್ ಸಿನಿಮಾದ ನಿರ್ದೇಶಕರಾದ ಅನೀಶ್ ಪೂಜಾರಿ ವೇಣೂರು, ಬೋಧಿ ಪ್ರೊಡಕ್ಷನ್ ಸ್ಮಿತೇಶ್ ಬಾರ್ಯ, ಸಂಗೀತ ನಿರ್ದೇಶಕ ಸಮರ್ಥನ್ ಎಸ್. ರಾವ್, ತಂಡದ ಸದಸ್ಯರಾದ ವಿನೋದ್ ರಾಜ್, ಜೊತೆಗೆ ನಿರ್ದೇಶನ ತಂಡದಲ್ಲಿರುವ ನಿಶಿತ್ ಶೆಟ್ಟಿ ಭಾಗವಹಿಸಿದ್ದರು.