Thu. Dec 26th, 2024

Delhi: ತ್ರಿಬಲ್‌ ಮರ್ಡರ್ ಕೇಸ್ ಗೆ ಬಿಗ್‌ ಟ್ವಿಸ್ಟ್‌ – ಅಪ್ಪ ಅವಮಾನ ಮಾಡಿದ್ದಕ್ಕೆ ಮಗನಿಂದ ಕೃತ್ಯ!!- ಈತನ ಬ್ಯಾಕ್‌ ಗ್ರೌಂಡ್‌ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!!

ದೆಹಲಿ:(ಡಿ.6)ದೆಹಲಿಯಲ್ಲಿ ನಡೆದ ಪತಿ , ಪತ್ನಿ ಮತ್ತು ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಸ್ವಂತ ಮಗನೇ ತನ್ನ ತಂದೆ ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ. ದೆಹಲಿಯಲ್ಲಿ ತ್ರಿವಳಿ ಕೊಲೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ವಿ.ಹಿ.ಪ ಬಜರಂಗದಳ ಪುತ್ತೂರು ನಗರ ಪ್ರಖಂಡದಿಂದ ದತ್ತಮಾಲಧಾರಣೆಗೆ ಚಾಲನೆ


ದಂಪತಿ ಹಾಗೂ ಅವರ ಪುತ್ರಿ ಸೇರಿ ಮೂವರನ್ನು ಯಾರೋ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದರು. ಮಗ ಮಾತ್ರ ಜಾಗಿಂಗ್ ಹೋಗಿದ್ದರಿಂದ ಬಚಾವಾಗಿದ್ದ ಎಂದು ಎಲ್ಲರೂ ನಂಬಿದ್ದರು ಆದರೆ ಆಗಿದ್ದೇ ಬೇರೆ.

ದಕ್ಷಿಣ ದೆಹಲಿಯ ನೆಬ್ ಸರಾಯ್​ನಲ್ಲಿ ಬೆಳ್ಳಂಬೆಳಿಗ್ಗೆ ಮೂವರ ಕೊಲೆಯಾಗಿತ್ತು, ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ 23 ವರ್ಷದ ಮಗಳು ಕವಿತಾ ಅವರ ಶವಗಳು ನೆಬ್ ಸರೈನಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿತ್ತು.

ಯಾರೋ ಅಪರಿಚಿತರು ಮನೆ ನುಗ್ಗಿ ಕೊಲೆ ಮಾಡಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಅಲ್ಲದೆ ಕೊಲೆಯಾದ ವೇಳೆ ಮಗ ಜಾಗಿಂಗ್ ಹೋಗಿದ್ದರಿಂದ ಬದುಕಿದ್ದಾನೆ ಎಂದು ಜನ ತಿಳಿದುಕೊಂಡಿದ್ದರು. ಆದರೆ ಅಸಲಿ ವಿಚಾರನೇ ಬೇರೆಯಾಗಿತ್ತು, ಇದೀಗ ಕೊಲೆ ಹಿಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಅದು ಮತ್ಯಾರು ಅಲ್ಲ ಆ ದಂಪತಿಯ ಮಗನೇ ಎಂಬುದು ತಿಳಿದುಬಂದಿದೆ. ತಂದೆ ತನಗೆ ಅವಮಾನ ಮಾಡಿದ್ದರು, ಜತೆಗೆ ಅಷ್ಟೂ ಆಸ್ತಿಯನ್ನು ತನ್ನ ಸಹೋದರಿಗೆ ನೀಡುವುದಾಗಿ ಹೇಳಿದ್ದರು, ಹಾಗಾಗಿ ಅವರ ಮದುವೆ ವಾರ್ಷಿಕೋತ್ಸವದಂದೇ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ.


ದಂಪತಿಯ ಪುತ್ರ ಅರ್ಜುನ್ ಈ ಕೊಲೆ ಆರೋಪಿ, ಈತ ದೆಹಲಿ ಒಲಿಂಪಿಕ್ ಸ್ಟೇಟ್ ಬಾಕ್ಸಿಂಗ್‌ನಲ್ಲಿ ಅರ್ಜುನ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಅರ್ಜುನ್ ಬೆಳಿಗ್ಗೆ 5:30ಕ್ಕೆ ಮನೆಯಿಂದ ವಾಕಿಂಗ್‌ಗೆ ಹೋಗಿದ್ದಾನೆ. ಬಳಿಕ 6.30ಕ್ಕೆ ಮನೆಗೆ ಬಂದಾಗ ಮನೆಯವರ ಕೊಲೆ ಮಾಡಲಾಗಿದೆ. ಕೂಡಲೇ ಪೊಲೀಸರಿಗೆ ಅರ್ಜುನ್ ಮಾಹಿತಿ ನೀಡಿದ್ದಾನೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಮುಂದುವರೆಸಿದಾಗ ಮನೆಯ ಸಿಸಿಟಿವಿಯಲ್ಲಿ ಮನೆಗೆ ಬೇರೆ ಯಾರೂ ನುಗ್ಗಿದ ಕುರಿತಂತೆ ಮಾಹಿತಿ ಇರಲಿಲ್ಲ. ಅಲ್ಲದೆ ಆರೋಪಿ ಅರ್ಜನ್ ಕೈಯಲ್ಲಿ ಗಾಯದ ಗುರುತುಗಳಿದ್ದವು, ಆತನನ್ನು ವಿಚಾರಿಸಿದ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಬಳಿಕ ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ವಿಚಾರಣೆ ವೇಳೆ ಆರೋಪಿ ಅರ್ಜುನ್ ಅಪ್ಪ ತನಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದರು, ಇತ್ತೀಚೆಗಷ್ಟೇ ಮನೆಯ ಹೊರಗಿನ ಕೆಲ ಸ್ನೇಹಿತರ ಮುಂದೆ ತಂದೆ ಅರ್ಜುನ್‌ಗೆ ಕಪಾಳಮೋಕ್ಷ ಮಾಡಿದ್ದ.

ಇದರಿಂದ ಅರ್ಜುವ್ ಬೇಸರಗೊಂಡಿದ್ದ, ಅಲ್ಲದೆ ಅಪ್ಪ ತಂಗಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರೂ, ಮತ್ತು ಆಸ್ತಿಯನ್ನು ತಂಗಿಗೆ ನೀಡುತ್ತಾರೆ ಎಂಬ ಸಂಶಯ ಕೂಡ ಇತ್ತು, ಇದರಿಂದ ಕೋಪಗೊಂಡ ಆತ ಡಿಸೆಂಬರ್ 4 ರಂದು ಮುಂಜಾನೆ 5 ಗಂಟೆಗೆ ಕೊಲೆಗೆ ಯೋಜನೆ ರೂಪಿಸಿ ಇಡೀ ಕುಟುಂಬವನ್ನೇ ಕೊಂದು ಹಾಕಿದ್ದ. ಮೊದಲು ತಂಗಿಯನ್ನು ಕೊಲೆ ಮಾಡಿದ ಬಳಿಕ ತಾಯಿಯನ್ನು ಕೊಂದು ಮೊದಲ ಮಹಡಿಯಲ್ಲಿದ್ದ ಅಪ್ಪನ್ನು ಕೊಲೆ ಮಾಡಿದ್ದಾನೆ. ಆರೋಪಿ ಅರ್ಜುನ್ ಬಾಕ್ಸರ್ ಆಗಿದ್ದು, ಹಲವು ಪದಕಗಳನ್ನು ಗೆದ್ದಿದ್ದಾನೆ.

Leave a Reply

Your email address will not be published. Required fields are marked *